ಕೊಲ್ಲಂ ಜಿಲ್ಲೆಯ ಅರಣ್ಯದ ಬಳಿಯ ಅಂಬಾಟ್ ಟೀ ಎಸ್ಟೇಟ್‌ನಲ್ಲಿ 15 ಸುಮಾರು ಒಂದು ಅಡಿ ಉದ್ದದ ಕಿಂಗ್ ಕೋಬ್ರಾ ಹಾವನ್ನು ಸೆರೆಹಿಡಿಯಲಾಗಿದೆ.
ತೋಟದಲ್ಲಿ ಕೆಲಸ ಮಾಡುವ ಕಾರ್ಮಿಕರು 15 ಅಡಿ ಉದ್ದದ ಹಾವು ಇರುವುದಾಗಿ ಹಾವು ಹಿಡಿಯುವುದನ್ನೇ ವೃತ್ತಿಯಾಗಿಸಿಕೊಂಡ ಸುರೇಶ್ ಎಂಬಾತನಿಗೆ ಮಾಹಿತಿ ನೀಡಿದ್ದಾರೆ. ಕೂಡಲೇ ಸ್ಥಳಕ್ಕೆ ಬಂದ ಸುರೇಶ್, ಕಿಂಗ್ ಕೋಬ್ರಾ ಹಾವನ್ನು ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ.
ಕಿಂಗ್ ಕೋಬ್ರಾ ಅರೆಪ್ರಜ್ಞಾವಸ್ಥೆಯಿಲ್ಲಿದ್ದರಿಂದ ಹಾವನ್ನು ಹಿಡಿದು ಕೆಲ ಸಮಯದ ನಂತರ ಅರಣ್ಯ ಪ್ರದೇಶದಲ್ಲಿ ಬಿಡಲಾಯಿತು ಎಂದು ಮೂಲಗಳು ತಿಳಿಸಿವೆ.
ಕೊಲ್ಲಂ ಅರಣ್ಯ ಪ್ರದೇಶದಲ್ಲಿ ಕಿಂಗ್ ಕೋಬ್ರಾ ಮತ್ತು ಅಲ್ಲಿರುವ ನದಿಗಳಲ್ಲಿ ಭಾರಿ ಪ್ರಮಾಣದಲ್ಲಿ ಮೊಸಳೆಗಳು ಕಂಡುಬಂದಿವೆ ಎಂದು ತೋಟದಲ್ಲಿ ಕಾರ್ಯನಿರ್ವಹಿಸುವ ಕಾರ್ಮಿಕರು ತಿಳಿಸಿದ್ದಾರೆ.