ರಕ್ತದ ಕ್ಯಾನ್ಸರ್ ವಿರುದ್ಧ ಹೋರಾಡಿದ ಬಾಲಕನಿಗೆ 10ನೇ ತರಗತಿಯಲ್ಲಿ ಶೇ. 95.8

ಸೋಮವಾರ, 9 ಮೇ 2016 (11:34 IST)
ರಾಘವ್ ಚಾಂದ‌ಕ್‌ನಿಗೆ ಕಳೆದ ವರ್ಷ ತೀವ್ರ ರಕ್ತದ ಕ್ಯಾನ್ಸರ್ ಇರುವುದನ್ನು ಗುರುತಿಸಲಾಯಿತು.16 ವರ್ಷದ ಬಾಲಕ ಸುಮಾರು 2 ತಿಂಗಳವರೆಗೆ ತರಗತಿಗೆ ಹಾಜರಾಗಲು ವಿಫಲನಾದ.
 
 ಬಾಲಕ ಕೆಮೋಥರಪಿಗೆ ಒಳಪಡುವ ಸಂದರ್ಭದಲ್ಲಿ ಅವನ ಶಾಲೆ ಶೈಕ್ಷಣಿಕ ಬೆಂಬಲ ಒದಗಿಸಿತು. ಕ್ಯಾನ್ಸರ್‌ನಂತ ಮಾರಕ ಕಾಯಿಲೆಗೂ ಜಗ್ಗದ ರಾಘವ್ ಚಾಂದಕ್, ಐಸಿಎಸ್‌ಸಿ ಪರೀಕ್ಷೆಯಲ್ಲಿ ಉತ್ಕೃಷ್ಟ ಸ್ಥಾನ ಗಳಿಸಬೇಕೆಂಬ ಪ್ರಬಲವಾದ ಬಯಕೆ ಅವನಿಗಿತ್ತು. ಆದ್ದರಿಂದ ಪಠ್ಯಪುಸ್ತಕಗಳನ್ನು ನೋಟ್‌ಗಳನ್ನು ಆಸ್ಪತ್ರೆ ಹಾಸಿಗೆಗೆ ತೆಗೆದುಕೊಂಡು ಹೋಗಿ 10ನೇ ತರಗತಿಯಲ್ಲಿ  ಶೇ.95.8 ಸ್ಕೋರ್ ಮಾಡಿದ್ದಾನೆ.
 
ಅವನು ಒಂದೂವರೆ ತಿಂಗಳ ಕಾಲ ಸತತವಾಗಿ ಆಸ್ಪತ್ರೆಯಲ್ಲಿದ್ದ. ಬಳಿಕ ಅವನು ಕೆಮೋಥೆರಪಿಗಾಗಿ ಆಸ್ಪತ್ರೆಗೆ ಪ್ರತಿ ತಿಂಗಳು ಏಳು ದಿನಗಳ ಕಾಲ ಹೋಗುತ್ತಿದ್ದ.  ರಕ್ತಕ್ಯಾನ್ಸರ್‌ನಿಂದ ಅವನ ರೋಗನಿರೋಧಕ ಶಕ್ತಿ ಕಡಿಮೆಯಾದರೂ ಅವನ ಹೋರಾಟದ ಮನೋಭಾವ ಕುಂದಲಿಲ್ಲ ಎಂದು ಅವನ ತಂದೆ ಮನೋಜ್ ಚಾಂದಕ್ ಹೆಮ್ಮೆಯಿಂದ ಹೇಳುತ್ತಾರೆ.
ಫುಟ್ಬಾಲ್ ಪ್ರೇಮಿಯಾದ ಬಾಲಕ ಶಾಲೆಯ ಶಿಕ್ಷಣ ಮುಗಿದ ಬಳಿಕ ಐಐಟಿಗೆ ಪ್ರವೇಶ ಪಡೆಯುವ ಕನಸು ಹೊಂದಿದ್ದಾನೆ. 
ತಾಜಾ ಸುದ್ದಿಗಳನ್ನು ಓದಲು ಮೊಬೈಲ್ ಆ್ಯಪ್‌ನ್ನು ಡೌನ್‌ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ