ತಲಾಕ್ ವಿರುದ್ಧ ಯುವತಿಯ ಬಂಡಾಯ: 'ನೀಚ ಪದ್ಧತಿಯನ್ನು ಬುಡಸಮೇತ ಕಿತ್ತೆಸೆಯುವೆ!'
ಸೋಮವಾರ, 24 ಅಕ್ಟೋಬರ್ 2016 (08:21 IST)
ಪುಣೆ: ತಲಾಕ್.. ಸದ್ಯ ದೇಶಾದ್ಯಂತ ಭಾರಿ ಸುದ್ದಿ ಮಾಡುತ್ತಿದೆ. ಇದೀಗ ಇದೇ ವಿಷ್ಯ ಮಹಾರಾಷ್ಟ್ರದ ಪುಣೆಯಲ್ಲಿ ಮತ್ತೆ ಪ್ರತಿಧ್ವನಿಸಿದೆ. ಅಷ್ಟಕ್ಕೂ ಕೇವಲ 18 ವರ್ಷದ ವಿವಾಹಿತ ಯುವತಿಗೆ ಪಾಪಿ ಗಂಡ ತ್ರಿವಳಿ ತಲಾಕ್ ಘೋಷಿಸಿ ಹೆಂಡತಿ ಮನೆಗೆ ನೋಟಿಸ್ ಕಳಿಸಿದ್ದಾನೆ. ಆದರೆ ಇದನ್ನ ಗಂಭೀರವಾಗಿ ತೆಗೆದುಕೊಂಡ ಅರ್ಷಿಯಾ, ಗಂಡ ಘೋಷಿಸಿದ ತಲಾಕ್ ವಿರುದ್ಧ ಬಂಡಾಯವೆದ್ದಿದ್ದಾಳೆ.
16 ವರ್ಷದವಳಿದ್ದಾಗಲೇ ಅರ್ಷಿಯಾ, ಬಾರಾಮತಿಯ ಮೊಹಮ್ಮದ್ ಖಾಜಿಮ್ ಸಲೀಮ್ ಭಾಗವಾನ್ ಎಂಬುವನನ್ನ ಮದುವೆಯಾಗಿದ್ದಳು. ಗಂಡ ತರಕಾರಿ ಮಾರಾಟ ಮಾಡುವ ಅಂಗಡಿ ಹಾಕಿ ಜೀವನ ಸಾಗಿಸುತ್ತಿದ್ದ. ಹೀಗಿರುವಾಗ ಮದುವೆಯಾಗಿ ಹೊಸದರಲ್ಲಿ ಎಲ್ಲವೂ ಚೆನ್ನಾಗೇ ಇತ್ತು. ಆದರೆ ಅರ್ಷಿಯಾ ಗರ್ಭಿಣಿ ಆದ ನಂತರ ಅತ್ತೆ ಕಿರಿಕ್ ಹೆಚ್ಚಾಯ್ತು. ತನಗೆ ಗಂಡು ಮಗುವೇ ಬೇಕು ಅನ್ನೋ ಹಠ ಅವಳದ್ದು. ಜೊತೆಗೆ ವರದಕ್ಷಿಣೆ ಕಿರುಕುಳ ನೀಡುತ್ತಿರುದಾಗಿ ಅರ್ಷಿಯಾ ಆರೋಪಿಸಿದ್ದಾಳೆ.
ಒಳ್ಳೆ ರೀತಿಯಲ್ಲಿ ವರದಕ್ಷಿಣೆ ನೀಡಿ ಅದ್ಧೂರಿಯಾಗಿ ಮದುವೆ ಮಾಡಿದ್ದಾರೆ. ಇಷ್ಟಾದರೂ ಗಂಡನ ಮನೆಯವರು ಹಣ ತೆಗೆದುಕೊಂಡು ಬರುವಂತೆ ಪೀಡಿಸುತ್ತಿದ್ದಾರೆ ಎಂದು ಪ್ರತಿಕಾಗೋಷ್ಠಿಯೊಂದರಲ್ಲಿ ತನ್ನ ಗೋಳು ತೋಡಿಕೊಡಿದ್ದಾಳೆ.
ವಿದ್ಯಾಭ್ಯಾಸ ಮುನಿಸಿಗೆ ಕಾರಣವಾಯ್ತಾ?
ಅರ್ಷಿಯಾ, ಓದಿನಲ್ಲಿ ಬಲು ಜಾಣೆ. ಹತ್ತನೇ ತರಗತಿಯಲ್ಲಿ 74 ಪ್ರತಿಶತ ಹಾಗೂ ಪಿಯು ಫಸ್ಟ್ ಇಯರ್ ನ ಲ್ಲಿ 78 ಪ್ರತಿಶತದಷ್ಟು ಅಂಕ ಪಡೆದಿದ್ದಾಳೆ. ಓದಿನಲ್ಲಿ ಆಸಕ್ತಿಯಾಗಿರುವುದರಿಂದ ಸಾಮಾನ್ಯವಾಗಿ ಗಂಡನೊಂದಿಗೆ ಮುಂದಿನ ವಿದ್ಯಾಭ್ಯಾಸದ ಬಗ್ಗೆ ಚರ್ಚಿಸಿದ್ದಾಳೆ. ಆದರೆ ಇದ್ಯಾವುದಕ್ಕೂ ಒಪ್ಪದ ಗಂಡನ ಮನೆಯವರು ನೀನು ಓದಿ ಯಾರನ್ನೂ ಉದ್ಧಾರ ಮಾಡಬೇಕಿಲ್ಲ, ಸುಮ್ಮನೆ ಮನೆಯಲ್ಲಿ ಬಿದ್ದೀರು ಎಂದಿದ್ದಾರೆ. ಇದರಿಂದ ಮನನೊಂದ ಅರ್ಷಿಯಾ ತಕ್ಷಣ ಮನೆ ಬಿಟ್ಟು ತವರು ಸೇರಿದ್ದಾಳೆ. ಹೀಗಿರುವಾಗ ಗಂಡ ಮಹಮದ್ ಹೆಂಡತಿಗೆ ತಲಾಕ್ ನೋಟಿಸ್ ಕಳಿಸಿದ್ದಾನೆ. ಇದ್ದನ್ನ ಒಪ್ಪದ ಅರ್ಷಿಯಾ, ಗಂಡನಿಗೆ ಕರೆ ಮಾಡುತ್ತಾ ಬಂದಿದ್ದಾಳೆ. ಆದರೆ ಅಡ್ನಾಡಿ ಗಂಡ ಯಾವುದೇ ಕರೆಯನ್ನು ಸ್ವೀಕರಿಸಿಲ್ಲ. ಇದಾದ ಬಳಿಕ ಮತ್ತೆ ಆತ ಕೆಲಸ ಮಾಡುವ ಸ್ಥಳಕ್ಕೆ ತೆರಳಿ ಭೇಟಿಯಾಗಿದ್ದಾಳೆ. ನಾನು ತಲಾಕ್ ಒಪ್ಪುವುದಿಲ್ಲ ಎಂದು ಗಂಡನ ಮನವೊಲಿಸಲು ಯತ್ನಿಸಿದ್ದಾಳೆ. ಜೊತೆಗೆ ಬೇರೆ ಮನೆ ಮಾಡಿಕೊಂಡು ಇರುವ ಬಗ್ಗೆ ಕೋರಿದ್ದಾಳೆ.
ನನ್ನ ಹೃದಯದಲ್ಲಿ ನಿನಗೆ ಸ್ಥಾನವಿಲ್ಲ
ಪತಿ ಮಹಾಶಯ 100 ಸ್ಟ್ಯಾಂಪ್ ಪೇಪರ್ ಮೇಲೆ ಮೂರು ಬಾರಿ ಅರ್ಷಿಯಾ ನಾನು ನಿನಗೆ ತಲಾಕ್ ನೀಡುತ್ತಿದ್ದೇನೆ. ನನ್ನ ಹೃದಯದಲ್ಲಿ ನಿನಗೆ ಸ್ಥಾನವಿಲ್ಲ ಎಂದು ಬರೆದು ಆಕೆಯ ಮನೆಗೆ ನೋಟಿಸ್ ಕಳಿಸಿದ್ದಾನೆ. ಜೊತೆಗೆ ಅರ್ಷಿಯಾಳ ಜೀವನೋಪಾಯಕ್ಕಾಗಿ 3000 ಹಣ ನೀಡುವುದಾಗಿ ತಿಳಿಸಿದ್ದಾನೆ. ಆದರೆ ತಾನು ನೋಟಿಸ್ ಸ್ವೀಕರಿಸಿಲ್ಲ ಎಂದು ಹೇಳಿಕೆ ನೀಡಿದ್ದಾಳೆ.
ಸಮುದಾಯದವರೇ ಸಹಕರಿಸಲಿಲ್ಲ
ತಲಾಕ್ ವಿಷಯ ತಲೆನೋವಾದಾಗ ಅರ್ಷಿಯಾ ಹಾಗೂ ಕುಟುಂಬ ಮದುವೆ ಮಾಡಿಸಿದ ಉಲೇಮಾ ಹಾಗೂ ಜಮಾತ್ ಸಮುದಾಯದ ಹಿರಿಯರನ್ನು ಭೇಟಿ ಮಾಡಿ ವಿಷಯ ಪ್ರಸ್ತಾಪಿಸಿದ್ದಾರೆ. ಆದರೆ ಸಮುದಾಯದವರು ಇದೆಲ್ಲ ನಮ್ಮ ಸಮುದಾಯದಲ್ಲಿ ಇದ್ದಿದ್ದೇ, ಇದರ ಬಗ್ಗೆ ನಾವು ಹೆಚ್ಚೇನೂ ಮಾತನಾಡಲ್ಲ ಎಂದು ಜಾರಿಕೊಂಡಿದ್ದಾರೆ. ಇದರಿಂದ ಕಂಗಾಲಾದ ಅರ್ಷಿಯಾ ಕುಟುಂಬ ನೇರವಾಗಿ ಬಾರಾಮತಿ ಪೊಲೀಸ್ ಠಾಣೆಗೆ ತೆರಳಿ ಗಂಡ ಹಾಗೂ ಅತ್ತಿಗೆ ವಿರುದ್ಧ ದೂರು ನೀಡಿದ್ದಾರೆ.
ತಲಾಕ್ ವಿರುದ್ಧ ಬಂಡಾಯ
ನನ್ನಂತ ಸಾವಿರಾರು ಮಹಿಳೆಯರು ಈ ತಲಾಕ್ ವಿರುದ್ಧ ರೋಸಿ ಹೋಗಿದ್ದಾರೆ. ಈ ಪದ್ಧತಿಯನ್ನು ಬುಡಸಮೇತ ಕಿತ್ತು ಹಾಕಲು ಹೋರಾಡುವುದುದಾಗಿ ಅರ್ಷಿಯಾ ಘೋಷಿಸಿದ್ದಾಳೆ. ಅಲ್ಲದೇ ಇಂತಹ ಪದ್ಧತಿ ಸಮಾಜದ ಸ್ವಾಸ್ಥ್ಯ ಕೆಡಿಸುತ್ತದೆ ಎಂದ ಆಕೆ, ನನ್ನಂತಹ ಎಷ್ಟೋ ಮಹಿಳೆಯರ ನೋವಿಗೆ ಸ್ಪಂದಿಸುವದಾಗಿ ಹೇಳಿಕೆ ನೀಡಿದ್ದಾಳೆ. ಇದೇ ವಿಷ್ಯವಾಗಿ ಕೇಂದ್ರ ಸಚಿವ ವೆಂಕಯ್ಯ ನಾಯ್ಡು ಪ್ರತಿಕ್ರಿಯೆ ನೀಡಿದ್ದು, ತಲಾಕ್ ಪದ್ಧತಿ ನಿಷೇಧಿಸಲು ಇದು ಸೂಕ್ತ ಸಮಯ ಎಂದಿದ್ದಾರೆ.
ಕೊನೆ ಮಾತು
ಅದೇನೆ ಇರಲಿ ತನ್ನನ್ನೇ ನಂಬಿ ಒಬ್ಬ ಹೆಣ್ಣು ಮಗಳು ಮನೆ-ಮಠ, ಕುಟುಂಬವನ್ನು ಬಿಟ್ಟು ಬಂದಿದ್ದಾಳೆ ಅನ್ನೋ ಚಿಕ್ಕ ಕರುಣೆ ಪತಿರಾಯನಿಗೆ ಬೇಡವೇ. ಅದರಲ್ಲೂ 8 ತಿಂಗಳ ಮಗುವಿನ ಗತಿ ಮುಂದೇನು. ಆಕೆಯೆ ಮುಂದಿನ ಬದುಕೇನು, ಅವಳಿಗಾಗಿ ನಾನು ಏನೆಲ್ಲ ಮಾಡಬೇಕು ಅನ್ನೋ ಸೌಜನ್ಯವೂ ಇಲ್ಲವಾಯಿತಲ್ಲ. ಇದೀಗ ಇದೇ ಅನಿಷ್ಟ ಪದ್ಧತಿ ವಿರುದ್ಧ ಸಿಡಿದೆದ್ದು ನಿಂತಿರುವ ಅರ್ಷಿಯಾಳ ನನಗೆ ಒದಗಿ ಬಂದಿರುವ ಗತಿ ಇನ್ಯಾರಿಗೂ ಬಾರದಿರಲಿ ಎಂದಿದ್ದಾಳೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.