26 ವರ್ಷಗಳ ನಂತ್ರ ಮಾಜಿ ಪ್ರಧಾನಿ ರಾಜೀವ್ ಗಾಂಧಿ ಹಂತಕನಿಗೆ ಪೆರೋಲ್

ಗುರುವಾರ, 24 ಆಗಸ್ಟ್ 2017 (19:50 IST)
ಮಾಜಿ ಪ್ರಧಾನಿ ದಿವಂಗತ ರಾಜೀವ್ ಗಾಂಧಿ ಹಂತಕ  ಪೆರಾರಿ ವಾಲನ್‌ಗೆ 26 ವರ್ಷಗಳ ನಂತರ ಕೇಂದ್ರ ಸರಕಾರ ಪೆರೋಲ್ ನೀಡಿ ಆದೇಶ ಹೊರಡಿಸಿದೆ. 
ತಂದೆಯ ಚಿಕಿತ್ಸೆಗಾಗಿ ತೆರಳಲು ಪೆರಾರಿ ವಾಲನ್‌ಗೆ 30 ದಿನಗಳ ಪೆರೋಲ್ ನೀಡಿ ಕೇಂದ್ರ ಸರಕಾರ ಆದೇಶ ಹೊರಡಿಸಿದೆ.
 
11991ರಲ್ಲಿ ಮಾಜಿ ಪ್ರಧಾನಿ ರಾಜೀವ್ ಗಾಂಧಿ ಹತ್ಯೆ ಪ್ರಕರಣದ ಆರೋಪಿಯಾಗಿದ್ದ ಪೆರಾರಿ ವಾಲನ್‌‌ನನ್ನು ಪೊಲೀಸರು ಬಂಧಿಸಿದ್ದರು. ರಾಜೀವ್ ಗಾಂಧಿ ಹತ್ಯೆ ಪ್ರಕರಣದಲ್ಲಿ ಆತನಿಗೆ ಕೋರ್ಟ್ ಜೀವಾವಧಿ ಶಿಕ್ಷೆ ವಿಧಿಸಿತ್ತು.
 
26 ವರ್ಷಗಳ ನಂತರ ಇದೇ ಮೊದಲ ಬಾರಿಗೆ ಅಪರಾಧಿ ಪೆರಾರಿ ವಾಲನ್‌ಗೆ 30 ದಿನಗಳ ಕಾಲ ಕೇಂದ್ರ ಸರಕಾರ ಪೆರೋಲ್ ನೀಡಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ