ಕಲ್ಲಿದ್ದಲು ಹಗರಣ: ಮೂವರು ಮಾಜಿ ಅಧಿಕಾರಿಗಳು ದೋಷಿಗಳೆಂದು ತೀರ್ಪಿತ್ತ ಸಿಬಿಐ ಕೋರ್ಟ್
ಶುಕ್ರವಾರ, 19 ಮೇ 2017 (12:07 IST)
ಕಲ್ಲಿದ್ದಲು ಇಲಾಖೆಯ ಮಾಜಿ ಕಾರ್ಯದರ್ಶಿ ಎಚ್.ಸಿ ಗುಪ್ತಾ ಸೇರಿ ಮೂವರು ಮಾಜಿ ಅಧಿಕಾರಿಗಳು ಬಹುಕೋಟಿ ಕೋಟಿ ರೂಪಾಯಿ ಕಲ್ಲಿದ್ದಲು ಹಗರಣದಲ್ಲಿ ದೋಷಿಗಳೆಂದು ಸಿಬಿಐ ವಿಶೇಷ ನ್ಯಾಯಾಲಯ ತೀರ್ಪು ನೀಡಿದೆ.
ಮಧ್ಯಪ್ರದೇಶದ ಕಲ್ಲಿದ್ದಲು ನಿಕ್ಷೇಪವನ್ನ ಖಾಸಗಿ ಕಂಪನಿಗೆ ಹಂಚಿಕೆ ಮಾಡಿದ ಯೋಜನೆಯಲ್ಲಿ ನಡೆದಿದ್ದ ಹಗರಣ ಇದಾಗಿದ್ದು, ಇದೇ ಮೊದಲ ಬಾರಿಗೆ ಮೂವರು ಅಧಿಕಾರಿಗಳು ತಪ್ಪಿತಸ್ಥರೆಂದು ಸಾಬೀತಾಗಿದೆ. ಭ್ರಷ್ಟಾಚಾರ ಕಾಯ್ದೆಯಡಿ ಮಾಜಿ ಅಧಿಕಾರಿಗಳಾದ ಎಚ್.ಸಿ. ಗುಪ್ತಾ, ಕೆ.ಎಸ್. ಕ್ರೋಫಾ, ಕೆ.ಸಿ. ಸಮ್ರಿಯಾ ಅವರು ದೋಷಿಗಳೆಂದು ಕೋರ್ಟ್ ಹೇಳಿದೆ.
2006 ಮತ್ತು 2008ರ ಸಂದರ್ಭ ಗುಪ್ತಾ ಕಲ್ಲಿದ್ದಲು ಕಾರ್ಯದರ್ಶಿಯಾಗಿದ್ದರು. ಕಲ್ಲಿದ್ದಲು ನಿಕ್ಷೇಪ ಹಂಚಿಕೆ ಮೇಲ್ವಿಚಾರಣಾ ಸಮಿತಿಯ ಅಧ್ಯಕ್ಷರಾಗಿಯೂ ಗುಪ್ತಾ ಕಾರ್ಯನಿರ್ವಹಿಸಿದ್ದರು. ಕಲ್ಲಿದ್ದಲು ನಿಕ್ಷೇಪ ಹಂಚಿಕೆ ಹರಾಜು ವೇಳೆ ಪಾರದರ್ಶಕತೆ ಕಾಯ್ದುಕೊಂಡಿಲ್ಲ. ಇದರಿಂದ ದೇಶದ ಬೊಕ್ಕಸಕ್ಕೆ ಕೋಟಿ ಕೋಟಿ ನಷ್ಟವಾಗಿದೆ ಎಂಬುದು ಆರೋಪ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ