ವರ ತಕ್ಕವನಲ್ಲ ಎಂದು ದಿಬ್ಬಣವನ್ನು ಹಿಂದಕ್ಕೆ ಕಳುಹಿಸಿದ ಮೂವರು ಮದುವಣಗಿತ್ತಿಯರು

ಸೋಮವಾರ, 11 ಮೇ 2015 (18:05 IST)
"ದಿಬ್ಬಣ ಹಿಂತಿರುಗಲಿದೆ", ಎಂಬ ಹೇಳಿಕೆಗಳು ಉತ್ತರಪ್ರದೇಶದಲ್ಲಿ ಇತ್ತೀಚಿಗೆ ಬಹಳ ಸಾಮಾನ್ಯವೆನಿಸತೊಡಗಿವೆ. ಇದು ಸಾಧ್ಯವಾಗಿರುವುದು ದಿಟ್ಟ ಯುವತಿಯರ ಕೆಲ ನಿರ್ಧಾರಗಳಿಂದ. ಈ ವಾರದ ಕೊನೆಯಲ್ಲಿ ಮೂವರು ಯುವತಿಯರು ತಮ್ಮ ಜತೆ ಮದುವೆಯಾಗಬೇಕಿದ್ದ ವರರನ್ನು ಹಿಂದಕ್ಕೆ ಕಳುಹಿಸಿದ್ದಾರೆ. ತಮಗೆ ತಕ್ಕವನಲ್ಲವೆಂದು ಮತ್ತು ಅವರ ಡಿಮಾಂಡ್ ಜಾಸ್ತಿ ಎಂಬ ಎರಡು ಕಾರಣಗಳನ್ನು ಮುಂದಿಟ್ಟುಕೊಂಡು ಯುವತಿಯರು ಈ ಕಠಿಣ ನಿರ್ಣಯವನ್ನು ತೆಗೆದುಕೊಂಡಿದ್ದಾರೆ.

ಗಮನಿಸಬೇಕಾದ ಸಂಗತಿ ಎಂದರೆ ಈ ಮೂರು ಘಟನೆಗಳು ನಡೆದಿರುವುದು ಗ್ರಾಮೀಣ ಪ್ರದೇಶಗಳಲ್ಲಿಯೇ . ಕನೌಜ್ ಜಿಲ್ಲೆಯ ಜೈನಗರದ ಯುವತಿ ಮೀನಾ( ಹೆಸರು ಬದಲಾಯಿಲಾಗಿದೆ) ಳನ್ನು ಹಾರ ಬದಲಾಯಿಸಿಕೊಳ್ಳಲು ಮಂಟಪಕ್ಕೆ ಕರೆ ತಂದಾಗ ವರನಿಗೆ  ತನಗೆ ಈ ಮೊದಲು ತಿಳಿಸದ್ದಕ್ಕಿಂತ ಹೆಚ್ಚು ವಯಸ್ಸಾಗಿದೆ ಎಂಬ ನಿರ್ಣಯಕ್ಕೆ ಬಂದ ಆಕೆ ಮದುವೆಯನ್ನು ನಿರಾಕರಿಸಿದಳು ಮತ್ತು ವೇದಿಕೆಯಿಂದ ಹೊರ ನಡೆದಳು. 
 
ಗ್ರಾಮದ ಕೆಲ ಹಿರಿಯರು ಮಧ್ಯಪ್ರವೇಶಿಸಿ ಸಂಧಾನಕ್ಕೆ ಪ್ರಯತ್ನಿಸಿದ್ದಾರೆ. ಆದರೆ ಹುಡುಗಿ ತನ್ನ ಹಠವನ್ನು ಬಿಡಲಿಲ್ಲ. "ವರನ ಪೋಷಕರು ತಮಗೆ ವಂಚಿಸಿದ್ದಾರೆ. ಮದುವೆಗೆ ಮೊದಲು ಆತನಿಗೆ 25 ವರ್ಷ ಎಂದು ಹೇಳಲಾಗಿತ್ತು. ಆದರೆ ವಾಸ್ತವಾಗಿ ಆತನಿಗೆ 38 ವರ್ಷ ವಯಸ್ಸು . 18 ವರ್ಷದ ಯುವತಿಯನ್ನು 38 ವರ್ಷದವನಿಗೆ  ಹೇಗೆ ಮದುವೆ ಮಾಡಿಸುವುದು. ಇದು ಆಕೆಯ ಸಂಪೂರ್ಣ ಜೀವನದ ಪ್ರಶ್ನೆ",  ಎಂದು ಆಕೆಯ ಸಂಬಂಧಿಕರು ಸಹ ಯುವತಿಯನ್ನು ಸಮರ್ಥಿಸಿಕೊಂಡಿದ್ದಾರೆ. 
 
ಇದೇ ರೀತಿಯಲ್ಲಿ ಇನ್ನೊಂದು ಗ್ರಾಮದಲ್ಲಿ ಸಹ ಯುವತಿಯೋರ್ವಳು ತನಗೆ ತಕ್ಕವನಲ್ಲವೆಂಬ ಕಾರಣಕ್ಕೆ ವರನನ್ನು ನಿರಾಕರಿಸಿದರೆ, ಇನ್ನೊಬ್ಬಳು ವಿಪರೀತ ವರದಕ್ಷಿಣೆ ಕೇಳುತ್ತಿದ್ದಾರೆ ಎಂಬ ಕಾರಣಕ್ಕೆ ಮದುವೆಯನ್ನು ನಿರಾಕರಿಸಿದ್ದಾರೆ. 

ವೆಬ್ದುನಿಯಾವನ್ನು ಓದಿ