ಜೆಟ್ ಬ್ಲಾಸ್ಟ್: ಇಂಡಿಗೋ ಬಸ್ ಗೆ ತಗುಲಿದ ವಿಮಾನದ ರಕ್ಕೆ; ಐವರಿಗೆ ಗಾಯ

ಶನಿವಾರ, 8 ಜುಲೈ 2017 (16:37 IST)
ನವದೆಹಲಿ:ಜು-8:ಸ್ಪೈಸ್ ಜಟ್ ವಿಮಾನದ ರಕ್ಕೆ ಇಂಡಿಗೋ ಬಸ್ ಗೆ ತಗುಲಿದ ಪರಿಣಾಮ ಬಸ್ ನಲ್ಲಿದ್ದ ಐವರು ಪ್ರಯಾಣಿಕರು ಗಾಯಗೊಂಡಿರುವ ಘಟನೆ ದೆಹಲಿಯ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನಡೆದಿದೆ.
 
ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸ್ಪೈಸ್ ಜಟ್ ಲ್ಯಾಂಡ್ ಆಗುವ ವೇಳೆ ವಿಮಾನದ ರಕ್ಕೆ ಇಂಡಿಗೊ ಬಸ್ ಕಿಟಕಿಗಳಿಗೆ ಬಡಿದಿದೆ. ಪರಿಣಾಮ ಬಸ್ ನ ಕಿಟಕಿಗಳು ಒಡೆದಿದೆ ಇದರಿಂದಾಗಿ ಬಸ್ ನಲ್ಲಿದ್ದ ಐವರು ಪ್ರಯಾಣಿಕರು ಗಾಯಗೊಂಡಿದ್ದು ಅವರನ್ನು ವಿಮಾನ ನಿಲ್ದಾಣದ ಕ್ಲಿನಿಕ್ ಗೆ ದಾಖಲಿಸಲಾಗಿದೆ.
 
ವಾಯುಯಾನ ಕಣ್ಗಾವಲು ಸಂಸ್ಥೆಯಾಗಿರುವ ಡಿಜಿಸಿಎ ಈ ಪ್ರಕರಣದ ತನಿಖೆಯನ್ನು ಕೈಗೊಂಡಿದೆ.
 

ವೆಬ್ದುನಿಯಾವನ್ನು ಓದಿ