ನವದೆಹಲಿ: ನಿನ್ನೆ ಮಧ್ಯ ರಾತ್ರಿಯಿಂದಲೇ 500, 1000 ರೂ. ಚಲಾವಣೆ ಬಂದ್ ಮಾಡಿರುವ ಕುರಿತು ಪ್ರಧಾನಿ ಮೋದಿ ಹೇಳಿದ್ದರೂ, ಈಗಾಗಲೇ ಆ ಮುಖ ಬೆಲೆಯ ಹಣ ಇಟ್ಟುಕೊಂಡವರು ಆತಂಕ ಪಡಬೇಕಾದ ಅವಶ್ಯಕತೆಯಿಲ್ಲ. ಸಂಬಂಧಿಸಿ ಕೆಲವು ನಿಯಮಾವಳಿಗಳನ್ನು ಜಾರಿ ಮಾಡಲಾಗಿದ್ದು, ಒಂದಿಷ್ಟು ಗಮನಾರ್ಹ ಸಂಗತಿಗಳು ಇಲ್ಲಿವೆ.
*500, 1000 ರೂ. ನೋಟುಗಳ ಮುದ್ರಣ ಹಾಗೂ ಚಲಾವಣೆ ಮಂಗಳವಾರ ರಾತ್ರಿಯಿಂದಲೇ ಬಂದ್ ಆಗಿವೆ.
* ಕಪ್ಪು ಹಾಗೂ ಭಯೋತ್ಪಾನೆ ನಿಗ್ರಹಕ್ಕೆ ಕೇಂದ್ರ ಸರಕಾರ ಕೈಗೊಂಡಿರುವ ಕಠಿಣ ನಿರ್ಧಾರ. ಹಾಗೂ ಕಪ್ಪು ಹಣ ನಿಗ್ರಹಕ್ಕೆ ಕೊನೆಯ ಅಸ್ತ್ರ.
*ಈ ಮುಖ ಬೆಲೆಯ ನೋಟುಗಳನ್ನು ನೀಡಲು 50 ದಿನಗಳ ಗಡವು.
* ಬ್ಯಾಂಕ್, ಪೋಸ್ಟ್ ಹಾಗೂ, ಪೆಟ್ರೋಲ್ ಬಂಕ್ ಹಾಗೂ ಕೇಂದ್ರ ಸರಕಾರದ ಕಚೇರಿಗಳಲ್ಲಿ ಹಣ ಬದಲಾಯಿಸಿಕೊಳ್ಳಲು ಅವಕಾಶ.
*ಆಧಾರ ಕಾರ್ಡ್, ಪ್ಯಾನ್ ಕಾರ್ಡ್, ವೋಟರ್ ಐಡಿ ಗುರುತಿನ ಪತ್ರ ನೀಡಿ ನೋಟುಗಳನ್ನು ವಾಪಸ್ ಮಾಡಿಕೊಳ್ಳಬೇಕು.
-*ಕಪ್ಪುಹಣದ ವಿರುದ್ಧ ಪ್ರಧಾನಿ ಮೋದಿ ಬ್ರಹ್ಮಾಸ್ತ್ರ
*ಇಂದು ಮತ್ತು ನಾಳೆ(09, 10) ದೇಶಾದ್ಯಂತ ಯಾವುದೇ ಎಟಿಎಂ ಮೆಷಿನ್ ಕಾರ್ಯ ನಿರ್ವಹಿಸುವುದಿಲ್ಲ.
*ಇಂದು, ನಾಳೆ ಎಟಿಎಂಗೆ ಹೋದರೂ ಹಣ ದೊರೆಯುವುದಿಲ್ಲ.
*500, 1000 ರೂ.ಗಳನ್ನು ಆಸ್ಪತ್ರೆ ಹಾಗೂ ವಿಮಾನ, ರೇಲ್ವೆ ಪ್ರಯಾಣಕ್ಕೆ ನವೆಂಬರ್ 11 ರವರೆಗೆ ಬಳಸಬಹುದು.
*ಬ್ಯಾಂಕ್ನಲ್ಲಿ ನಗದು ರಹಿತ ವಹಿವಾಟು ಹಾಗೂ ವ್ಯವಹಾರಕ್ಕೆ ಯಾವುದೇ ತೊಂದರೆ ಇಲ್ಲ
*ನೋಟು ವಾಪಸ್ ನೀಡಲು ಡಿಸೆಂಬರ್ 30 ಕೊನೆಯ ದಿನ.
*ಇಂದಿನಿಂದ 100, 50, 20, 10, 5 ರೂ. ವ್ಯವಹಾರ ಮಾತ್ರ ಮಾತ್ರ ಕಾನೂನುಬದ್ಧ
*500, 1000 ರೂ. ನೋಟುಗಳಿಗೆ ಇನ್ನು ಮುಂದೆ ಯಾವುದೇ ಮಾನ್ಯತೆ ಇಲ್ಲ.
* ನವೆಂಬರ್ 11ರಿಂದ ಎಟಿಎಂನಲ್ಲಿ ಪ್ರತಿದಿನ 2 ಸಾವಿರ ರೂ. ಮಾತ್ರ ಹೊರ ತೆಗೆಯಬಹುದು.
* ಇಂದು ಎಲ್ಲ ಬ್ಯಾಂಕ್ಗಳೂ ಎಂದಿನಂತೆ ಕಾರ್ಯನಿರ್ವಹಿಸುತ್ತದೆ.
*2 ಸಾವಿರ ನೋಟು ಚಲಾವಣೆಗೆ ಆರ್ಬಿಐ ನಿಂದ ಈಗಾಗಲೇ ಒಪ್ಪಿಗೆ ದೊರೆತಿದೆ.
*ಮುಂದಿನ ದಿನಗಳಲ್ಲಿ ಮತ್ತೆ 500 ಹಾಗೂ 2000 ನೋಟು ಬರಲಿವೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ