ರಾಜ್ಯಸಭೆ: 6 ಟಿಎಂಸಿ ಸಂಸದರ ಅಮಾನತು
ಪಾಲಿಸಲ್ಲ ಎಂಬ ನಾಮಫಲಕ ಪ್ರದರ್ಶಿಸಿದ ತೃಣಮೂಲ ಕಾಂಗ್ರೆಸ್ ಪಕ್ಷದ 6 ಸಂಸದರನ್ನು ರಾಜ್ಯಸಭಾ ಕಲಾಪದಿಂದ ಅಮಾನತು ಮಾಡಲಾಗಿದೆ.
ಪೆಗಾಸಾಸ್ ಗುಪ್ತಚಾರಿಕೆ ಖಂಡಿಸಿ ಪ್ರತಿಭಟನೆ ನಡೆಸಿದ ಟಿಎಂಸಿ ಕಾರ್ಯಕರ್ತರಿಂದ ಮಂಗಳವಾರ ರಾಜ್ಯಸಭೆಯಲ್ಲಿ ಕಲಾಪಕ್ಕೆ ಅಡ್ಡಿಯುಂಟಾಯಿತು. ಈ ಹಿನ್ನೆಲೆಯಲ್ಲಿ ಟಿಎಂಸಿ ಕಾರ್ಯಕರ್ತರನ್ನು ದಿನದ ಮಟ್ಟಿಗೆ ಅಮಾನತು ಮಾಡಲಾಯಿತು.
ಡೋಲಾ ಸೇನ್, ಮೊಹಮದ್ ನಡಿಮುಲ್ ಹಕ್, ಅಬಿರ್ ರಂಜನ್ ಬಿಸ್ವಾಸ್, ಸಂತ ಛೆಟ್ರಿ, ಅರ್ಪಿತಾ ಘೋಷ್, ಮೌಸಮ್ ನೂರ್ ಅವರನ್ನು ದಿನದ ಕಲಾಪದ ಮಟ್ಟಿಗೆ ಅಮಾನತು ಮಾಡಲಾಗಿದೆ.