ಕೊರೋನಾದಿಂದಾಗಿ ಶೇ.60 ಭಾರತೀಯರ ಕತೆ ಹೀಗಾಗಿದೆ

ಗುರುವಾರ, 6 ಮೇ 2021 (09:04 IST)
ನವದೆಹಲಿ: ದೇಶದಲ್ಲಿ ಕೊರೋನಾ, ಲಾಕ್ ಡೌನ್ ಇವೆರಡು ಶಬ್ಧ ಕಿವಿಗೆ ಬಿದ್ದರೆ ಜನ ಬೆಚ್ಚಿಬೀಳುವಂತಾಗಿದೆ. ರೋಗದ ಜೊತೆಗೆ ಮನೆಯೊಳಗೆ ಕೂರುವ, ಸಾಮಾನ್ಯ ಜೀವನ ನಡೆಸಲಾಗದ ಅಸಹಾಯಕತೆ ಇನ್ನೊಂದೆಡೆ.


ನೂತನ ಅಧ್ಯಯನವೊಂದರ ಪ್ರಕಾರ ಶೇ.60 ರಷ್ಟು ಭಾರತೀಯರು ಕೊರೋನಾದಿಂದಾಗಿ ದೇಶದಲ್ಲಿ ಉಂಟಾಗಿರುವ ಅವಸ್ಥೆ, ವೈದ್ಯಕೀಯ ಸೌಲಭ್ಯದ ಕೊರತೆಯಿಂದಾಗಿ ಬೇಸತ್ತು ಹೋಗಿದ್ದಾರಂತೆ. ಇದರಿಂದಾಗಿ ಹೆಚ್ಚಿನ ಭಾರತೀಯರು ಮಾನಸಿಕವಾಗಿ ಕುಗ್ಗಿ ಹೋಗಿದ್ದಾರೆ ಎಂದು ಅಧ್ಯಯನವೊಂದು ಬಹಿರಂಗಪಡಿಸಿದೆ.

ಇನ್ನಷ್ಟು ದಿನ ಲಾಕ್ ಡೌನ್ ಮುಂದುವರಿದರೆ ಮನೆಯೊಳಗೆ ಕೂತೂ ಜನರ ಮಾನಸಿಕ ಸ್ಥಿತಿ ತೀರಾ ಹದಗೆಡುವುದು ಸಹಜ. ಕಳೆದ ಬಾರಿಯೂ ಸಾಕಷ್ಟು ಇಂತಹ ಪ್ರಕರಣಗಳು ಕೇಳಿಬಂದಿದ್ದವು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ