ಇಲಿ ಕಚ್ಚಿ 40 ದಿನದ ಹಸುಗೂಸು ಸಾವು..!
40 ದಿನದ ಹಸುಗೂಸಿನ ಮೂಗಿಗೆ ಇಲಿ ಕಚ್ಚಿ ಮಗು ಸಾವನ್ನಪ್ಪಿರುವ ದಾರುಣ ಘಟನೆಯೊಂದು ಕರ್ನೂಲ್ ಜಿಲ್ಲೆಯಲ್ಲಿ ನಡೆದಿದೆ. ಇಲಿ ಮಗುವಿನ ಮೂಗಿಗೆ ಕಚ್ಚಿದ ಪರಿಣಾಮ ತೀವ್ರ ರಕ್ತಸ್ರಾವವಾಗಿದೆ.
ತಕ್ಷಣ ಹೈದರಾಬಾದ್‌ನ ನಿಲೋಫರ್ ಆಸ್ಪತ್ರೆಗೆ ದಾಖಲಿಸಿದರೂ ಕೂಡ ಚಿಕಿತ್ಸೆ ಫಲಕಾರಿಯಾಗದೇ ಮಗು ಸಾವನ್ನಪ್ಪಿರುವುದು ಮೂಲಗಳಿಂದ ತಿಳಿದುಬಂದಿದೆ.ಇನ್ನು ಮಗುವಿನ ಸಾವಿನಿಂದಾಗಿ ಇಡೀ ಗ್ರಾಮದಲ್ಲಿ ದುಃಖದ ಛಾಯೆ ಆವರಿಸಿದೆ.