ಕಾರು ಗುದ್ದಿದ ಪರಿಣಾಮ 78 ವರ್ಷದ ವೃದ್ಧೆ ಸ್ಥಳದಲ್ಲೇ ಸಾವು..!
78 ವರ್ಷದ ವೃದ್ಧೆಯೊಬ್ಬರು ನಡೆದುಕೊಂಡು ಹೋಗುತ್ತಿದ್ದು ತಿರುವಿನಲ್ಲಿ ಕಾರೊಂದು ಸ್ಪೀಡ್ ಆಗಿ ಬಂದು ವೃದ್ಧೆಗೆ ಡಿಕ್ಕಿ ಹೊಡೆದ ರಭಸಕ್ಕೆ ವೃದ್ಧೆ ಸ್ಥಳದಲ್ಲೇ ಸಾವನ್ನಪ್ಪಿರೋ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.ಮೃತ ವೃದ್ಧೆ ವಾಕಿಂಗ್ ಎಂದು ಮನೆಯಿಂದ ಹೊರ ಬಂದಾಗ ಅಪಘಾತ ನಡೆದು ಹೋಗಿದೆ. ಅಪಘಾತದ ಬಳಿಕ ಕಾರು ಚಾಲಕ ಸ್ಥಳದಿಂದ ಪರಾರಿಯಾಗಿದ್ದು ಘಟನೆಯ ದೃಶ್ಯಗಳು ಸಿಸಿ ಟಿವಿಯಲ್ಲಿ ಸೆರೆಯಾಗಿದ್ದು ಆರೋಪಿಗಾಗಿ ಪೋಲಿಸರು ಬಲೆ ಬೀಸಿದ್ದಾರೆ.