ಯುವತಿಗೆ ಬಟ್ಟೆ ಬಿಚ್ಚಲು ಹೇಳಿದ ನೃತ್ಯ ಶಿಕ್ಷಕ!

ಶನಿವಾರ, 20 ಏಪ್ರಿಲ್ 2019 (12:16 IST)
ಹೈದರಾಬಾದ್ : 21 ವರ್ಷ ವಯಸ್ಸಿನ ಯುವತಿಗೆ ನೃತ್ಯ ಶಿಕ್ಷಕನೊಬ್ಬ ಬಟ್ಟೆ ಬಿಚ್ಚಲು ಹೇಳಿದ ಘಟನೆ ತೆಲಂಗಾಣದ ನಾರಾಯಣಗುಡ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.


ಯುವತಿ ಡ್ಯಾನ್ಸ್ ಕಲಿಯಲು ಶಾಲೆಗೆ ಹೋಗುತ್ತಿದ್ದು, ಅಲ್ಲಿ ಡ್ಯಾನ್ಸ್ ಅಕಾಡೆಮಿಯ ಶಿಕ್ಷಕ ಕ್ಲಾಸ್ ಆರಂಭವಾಗುವ ಮೊದಲು ವಿದ್ಯಾರ್ಥಿಗಳಿಗೆ ಬಟ್ಟೆ ಬಿಚ್ಚುವಂತೆ ತಿಳಿಸಿದ್ದಾನೆ. ಆದರೆ ಇದಕ್ಕೆ ಯುವತಿ ನಿರಾಕರಿಸಿದ್ದಾಳೆ.

 

ಆದ್ದರಿಂದ ಯುವತಿಯನ್ನು ಶಿಕ್ಷಕ ತರಗತಿಯಿಂದ ಹೊರಗೆ ಹಾಕಿದ್ದಾನೆ. ಈ ಕುರಿತು ಯುವತಿ ಶಿಕ್ಷಕನ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ಈ  ದೂರಿನ ಅನ್ವಯ ಪೊಲೀಸರು ಆರೋಪಿಯ ವಿರುದ್ಧ ಸೆಕ್ಷನ್ 509 (ಮಹಿಳೆ ಅವಮಾನ ಮಾಡುವ ಉದ್ದೇಶ) ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.

 

ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ ಮೊಬೈಲ್ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ.

 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ