ದೇಶ ಸೇವೆ ಮಾಡಲು ಯುವಕರಿಗೆ ಸುವರ್ಣ ಅವಕಾಶ : ರಾಜನಾಥ್ ಸಿಂಗ್

ಶುಕ್ರವಾರ, 17 ಜೂನ್ 2022 (16:27 IST)
ಶ್ರೀನಗರ : ನಿರುದ್ಯೋಗ ಸಮಸ್ಯೆಯನ್ನು ಹೋಗಲಾಡಿಸಲು ಮತ್ತು ದೇಶದ ಮಿಲಿಟರಿಯಲ್ಲಿ ಸೇವೆ ಮಾಡಲು ಯುವ ಜನರಿಗೆ ಅವಕಾಶ ನೀಡುವ ನಿಟ್ಟಿನಲ್ಲಿ ಅಗ್ನಿಪಥ್ ಯೋಜನೆ ಆರಂಭಿಸಲಾಗಿದೆ.
 
ಅಗ್ನಿಪಥ್ ದೇಶದ ಯುವಕರಿಗೆ ದೇಶ ಸೇವೆ ಮಾಡಲು ಒದಗಿ ಬಂದಿರುವ ಸುವರ್ಣ ಅವಕಾಶವಾಗಿದೆ ಎಂದು ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅಭಿಪ್ರಾಯಪಟ್ಟಿದ್ದಾರೆ.

ಅಗ್ನಿವೀರರಾಗಿ 4 ವರ್ಷ ಸೇನೆಯಲ್ಲಿ ಸೇವೆ ಸಲ್ಲಿಸುವ ಅವಕಾಶ ಕಲ್ಪಿಸಿಕೊಡಲಾಗಿದೆ. ಅಗ್ನಿವೀರರ ಮೂಲಕ ದೇಶದ ಸೇನೆಯನ್ನು ಮತ್ತಷ್ಟು ಬಲಗೊಳಿಸುವ ಮತ್ತು ದೇಶದಲ್ಲಿರುವ ನಿರುದ್ಯೋಗ ಸಮಸ್ಯೆಯನ್ನು ಹೋಗಲಾಡಿಸಲು ಕ್ರಮ ವಹಿಸಿದ್ದೇವೆ ಎಂದರು. 

ಕಳೆದ 2 ವರ್ಷಗಳಲ್ಲಿ ಹಲವು ಯುವಕರಿಗೆ ಸೇನೆಯಲ್ಲಿ ಸೇವೆ ಸಲ್ಲಿಸುವ ಅವಕಾಶ ಸಿಗದೆ ಇರುವುದನ್ನು ಗಮನಿಸಿ ಅಗ್ನಿಪಥ್ ಯೋಜನೆಯನ್ನು ಆರಂಭಿಸಿದ್ದೇವೆ. ದೇಶ ಸೇವೆ ಮಾಡಲು ಯುವಕರಿಗೆ ಅವಕಾಶ ನೀಡುವ ನಿಟ್ಟಿನಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಅಗ್ನಿವೀರರ ನೇಮಕದ ವಯೋಮಿತಿಯನ್ನು 21 ರಿಂದ 23ಕ್ಕೆ ಏರಿಸಲಾಗಿದೆ.

ಈ ಮೂಲಕ ಯುವಜನರಿಗೆ ಸೇನೆ ಸೇರಲು ಉತ್ತಮವಾದ ಅವಕಾಶ ನೀಡಿದ್ದೇವೆ. ಕೂಡಲೇ ಈ ಬಗ್ಗೆ ಯುವಕರು ಗಮನ ಹರಿಸಿ ತಯಾರಿ ನಡೆಸಿ. ಕೆಲದಿನಗಳಲ್ಲಿ ನೇಮಕಾತಿ ಪ್ರಕ್ರಿಯೆ ಆರಂಭಿಸುತ್ತೇವೆ ಎಂದು ತಿಳಿಸಿದರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ