ಪ್ರೀತಿಸಿ ಮದುವೆಯಾದ ಹಿಂದೂ ಯುವಕ- ಮುಸ್ಲಿಂ ಯುವತಿ, ರಕ್ಷಣೆ ಕೋರಿದ ನವಜೋಡಿ
ಇಬ್ಬರದ್ದು ಬೇರೆ ಬೇರೆ ತಾಲೂಕಾದರೂ ಚಿಕ್ಕಬಳ್ಳಾಪುರ ನಗರದಲ್ಲಿ ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಮಾಡುವಾಗ ಆದ ಪರಿಷಯ ಸ್ನೇಹಕ್ಕೆ ತಿರುಗಿ ಪ್ರೀತಿಯಾಗಿದೆ.
ಇಬ್ಬರು ತಮ್ಮ ಪ್ರೀತಿಯ ವಿಚಾರವನ್ನು ಮನೆಯವರಿಗೆ ತಿಳಿಸಿದ್ದರು. ಆದರೆ ಮನೆಯವರು ಧರ್ಮದ ವಿಚಾರಕ್ಕೆ ವಿರೋಧ ವ್ಯಕ್ತಪಡಿಸಿದ್ದರು.
ಇಬ್ಬರದ್ದೂ ಬೇರೆ ಬೇರೆ ಧರ್ಮವಾದ ಕಾರಣ ಮನೆಯವರು ಮದುವೆಗೆ ವಿರೋಧ ವ್ಯಕ್ತಪಡಿಸಿದ್ದಾರೆ. ಪ್ರೀತಿ ವಿಚಾರ ತಿಳಿಯುತ್ತಿದ್ದಂತೆ ಯುವತಿಯನ್ನ ಕೆಲಸಕ್ಕೆ ಕಳುಹಿಸದೇ ಮನೆಯಲ್ಲೇ ಉಳಿಸಿಕೊಂಡಿದ್ದಾರೆ. ವಿರೋಧದ ನಡುವೆಯೇ ಮನೆಯಿಂದ ಹೊರಬಂದ ನಜ್ಮಾ, ಹರೀಶ್ ಬಾಬು ಜೊತೆ ವಿವಾಹವಾಗಿದ್ದಾರೆ.