ಪಂಜಾಬ್ ನಲ್ಲಿ ಆಪ್ ಅಧಿಕಾರಕ್ಕೆ 1 ತಿಂಗಳು: ಜುಲೈ 1ರಿಂದ 300 ಯೂನಿಟ್ ವಿದ್ಯುತ್ ಉಚಿತ!
ಪಂಜಾಬ್ ನಲ್ಲಿ ಇದೇ ಮೊದಲ ಬಾರಿಗೆ ಅಧಿಕಾರಕ್ಕೇರಿದ ಆಮ್ ಆದ್ಮಿ ಪಕ್ಷ ಒಂದು ತಿಂಗಳು ಅಧಿಕಾರ ಪೂರೈಸಿದ ಬೆನ್ನಲ್ಲೇ ಜನರಿಗೆ ಬಂಪರ್ ಕೊಡುಗೆ ನೀಡಿದೆ.
ಜುಲೈ 1ರಿಂದ ಅನ್ವಯವಾಗುವಂತೆ ರಾಜ್ಯದ ಜನರಿಗೆ ಉಚಿತವಾಗಿ 300 ಯೂನಿಟ್ ವರೆಗೆ ವಿದ್ಯುತ್ ಪೂರೈಕೆ ಆಗಲಿದೆ ಎಂದು ಆಪ್ ಸರಕಾರ ಘೋಷಿಸಿದೆ.
ಮುಖ್ಯಮಂತ್ರಿ ಭಗವತ್ ಮನ್ ಗುರುವಾರ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ್ದು, ಜನವರಿ 16ರಂದು ರಾಜ್ಯದ ಜನತೆಗೆ ಸಿಹಿ ಸುದ್ದಿ ನೀಡಲಿದ್ದೇವೆ ಎಂದು ಹೇಳಿದ್ದರು. ಅದರಂತೆ ಇಂದು ಚುನಾವಣೆಗೂ ಮುನ್ನ ನೀಡಿದ ಭರವಸೆಯಂತೆ 300 ಯೂನಿಟ್ ವಿದ್ಯುತ್ ಉಚಿತವಾಗಿ ಆಪ್ ಸರಕಾರ ನೀಡಲಿದೆ.
ಇದೇ ವೇಳೆ ಮನೆ ಬಾಗಿಲಿಗೆ ರೇಷನ್ ತಲುಪಿಸುವ ಭರವಸೆ ನೀಡಿದ್ದ ಆಪ್ ಸರಕಾರ ಈ ಭರವಸೆ ಈಡೇರಿಸಲು ಸಧ್ಯಕ್ಕೆ ಸಾಧ್ಯವಿಲ್ಲ ಎಂದು ತಿಳಿಸಿದೆ.