ಭಾರತದಲ್ಲಿ ಅಕ್ರಮವಾಗಿ ನೆಲೆಸಿದ್ದ ಪಾಕಿಸ್ತಾನದ ಯುವಕ ಅರೆಸ್ಟ್

ಶುಕ್ರವಾರ, 17 ಮಾರ್ಚ್ 2023 (11:20 IST)
ಮುಂಬೈ : 8 ವರ್ಷಗಳ ಕಾಲ ಭಾರತದಲ್ಲಿ ಅಕ್ರಮವಾಗಿ ನೆಲೆಸಿದ್ದ 22 ವರ್ಷದ ಪಾಕಿಸ್ತಾನದ ಯುವಕನನ್ನು ಪುಣೆ ಪೊಲೀಸರು ಬಂಧಿಸಿದ್ದಾರೆ. ಯುವಕ ನಕಲಿ ದಾಖಲೆಗಳನ್ನು ಬಳಸಿಕೊಂಡು 8 ವರ್ಷಗಳ ಕಾಲ ಭಾರತದಲ್ಲಿ ಅಕ್ರಮವಾಗಿ ನೆಲೆಸಿದ್ದಾನೆ ಎಂಬ ಆರೋಪದ ಮೇಲೆ ಆತನನ್ನು ಬಂಧಿಸಲಾಗಿದೆ.

ಆತನನ್ನು ಭವಾನಿ ಪೇಠ್ನಲ್ಲಿ ನೆಲೆಸಿರುವ ಮಹಮ್ಮದ್ ಅಮನ್ ಅನ್ಸಾರಿ (22) ಎಂದು ಗುರುತಿಸಲಾಗಿದೆ. ಯುವಕ 2015 ರಿಂದ ಭಾರತದಲ್ಲಿ ನೆಲೆಸಿದ್ದಾನೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ವರದಿಗಳ ಪ್ರಕಾರ ಯುವಕ ಭಾರತ ಹಾಗೂ ಪಾಕಿಸ್ತಾನದ ದಂಪತಿಗೆ ಜನಿಸಿದ್ದಾನೆ. ಆತನ ತಾಯಿ ಭಾರತ ಮೂಲದವಳಾಗಿದ್ದು, ತಂದೆ ಪಾಕಿಸ್ತಾನದವರು. ದಂಪತಿ ಬೇರ್ಪಟ್ಟ ಬಳಿಕ ಮಹಿಳೆ ತನ್ನ ಮಗನನ್ನು ಭಾರತಕ್ಕೆ ಕರೆತಂದಿದ್ದು, 2015ರಿಂದ ತನ್ನ ತಾಯಿಯ ಕುಟುಂಬದೊಂದಿಗೆ ವಾಸವಿದ್ದಾಳೆ. ಆದರೆ ಯುವಕ ಭಾರತದಲ್ಲಿ ಅಕ್ರಮವಾಗಿ ನೆಲೆಸಲು ನಕಲಿ ದಾಖಲೆಗಳನ್ನು ಬಳಸಿದ್ದಾನೆ ಎಂದು ಆರೋಪಿಸಲಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ