ಪರಸ್ತ್ರೀ ವ್ಯಾಮೋಹಕ್ಕೆ ತನ್ನ ಮಗನನ್ನ ಕೊಂದ ಪಾಪಿ ತಂದೆ

ಸೋಮವಾರ, 30 ಅಕ್ಟೋಬರ್ 2023 (17:49 IST)
ಪರಸ್ತ್ರೀ ವ್ಯಾಮೋಹದಿಂದ ತನ್ನ  ಹೆತ್ತ ಮಗನನ್ನ ನಿರ್ದಯಿಯಾಗಿ ಕೊಲೆ ಮಾಡಿರುವ ಘಟನೆ ಜಮ್‍ಷೆಡ್‍ಪುರದ ಖಾಕ್ರಿಪಾಡಾ ಪ್ರದೇಶದಲ್ಲಿ ನಡೆದಿದೆ.
 
ಹೆತ್ತ ಮಗನನ್ನೆ ಕೊಲೆ ಮಾಡಿದ ಪಾಪಿ ತಂದೆಯನ್ನು ಗೋಪಾಲಪು ಕಟಿನ್‍ಪದಾ ಪ್ರದೇಶದ ನಿವಾಸಿ ಅಜಯ್ ನಮ್ತಾ ಎಂದು ಗುರುತಿಸಲಾಗಿದೆ.ಈತ ತನ್ನ ಅಪ್ರಾಪ್ತ ಮಗನನ್ನು ಕೊಳದಲ್ಲಿ ಮುಳುಗಿಸಿ ಕೊಲೆ ಮಾಡಿರುವುದಾಗಿ ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. 
 
ವಿಚಾರಣೆ ಸಂದರ್ಭದಲ್ಲಿ ಆರೋಪಿ ತನ್ನ ಮಗನನ್ನು ಕೊಲೆ ಮಾಡಿರುವುದನ್ನು ಒಪ್ಪಿಕೊಂಡಿದ್ದಾನೆ ಎನ್ನಲಾಗಿದೆ.ಪತ್ನಿ ಮತ್ತು ಮಗನೊಂದಿಗೆ ಇರಲು ಇಷ್ಟವಿರಲಿಲ್ಲ ಹೀಗಾಗಿ ತನ್ನ ಮಗನನು ಕೊಲೆ ಮಾಡಿದ್ದಾನೆ ಎಂದು ಪೊಲೀಸ್ ಮೂಲಗಳು ತಿಳಿಸಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ