ಪೋಷಕರು ಐಫೋನ್ ಕೊಡಿಸಿಲ್ಲ ಎಂದು ವಿದ್ಯಾರ್ಥಿನಿ ಆತ್ಮಹತ್ಯೆ!
ನಾಗ್ಪುರ ಜಿಲ್ಲೆಯ ಹಿಂಗ್ನಾ ಪಟ್ಟಣದ ರೈಸೋನಿ ಕಾಲೇಜಿನಲ್ಲಿ 18 ವರ್ಷದ ವಿದ್ಯಾರ್ಥಿನಿ ಪ್ರಥಮ ವರ್ಷದ ಪದವಿ ವ್ಯಾಸಂಗ ಮಾಡುತ್ತಿದ್ದಳು. ವಿದ್ಯಾರ್ಥಿನಿ ಮನೆಯವರ ಬಳಿ ಐಫೋನ್ ಕೊಡಿಸುವಂತೆ ಒತ್ತಾಯಿಸಿದ್ದಳು.
ವಿದ್ಯಾರ್ಥಿನಿಯ ಪೋಷಕರು ಮನೆ ಕೆಲಸದವರಾಗಿದ್ದು, ತಕ್ಷಣ ಕೊಡಿಸಲು ಸಾಧ್ಯವಿಲ್ಲ. ಮುಂದಿನ ದಿನಗಳಲ್ಲಿ ಯಾವತ್ತಾದರೂ ಕೊಡಿಸುತ್ತೇನೆ ಎಂದು ಹೇಳಿದ್ದರು. ಇದಕ್ಕೆ ಒಪ್ಪದ ವಿದ್ಯಾರ್ಥಿನಿಯೂ ಕೂಡಲೇ ಐಫೋನ್ ಬೇಕೇ ಬೇಕು ಎಂದು ಹೇಳಿದ್ದಳು. ಆದರೆ ಪೋಷಕರಿಗೆ ತಕ್ಷಣ ಕೊಡಿಸಲು ಸಾಧ್ಯವಾಗಿಲ್ಲ.