18 ದಿನದ ಸಂಬಳ ಕೇಳಿದ್ದಕ್ಕೆ ಯುವಕನ ಮೇಲೆ ಹಲ್ಲೆ
ಬಾಕಿ ಸಂಬಳ ಕೇಳಲು ಬಂದ ನೌಕರನಿಗೆ ಮಹಿಳಾ ಉದ್ಯಮಿಯೋರ್ವಳು ತನ್ನ ಬೂಟು ನೆಕ್ಕುವಂತೆ ಮಾಡಿದ ಹಾಗೂ ಇತರ ನೌಕರರಿಂದ ಬೆಲ್ಟ್‌ನಿಂದ ಹೊಡೆಸಿದ ಹೇಯ ಘಟನೆ ಗುಜರಾತ್ನ ಮೊರ್ಬಿಯಲ್ಲಿ ನಡೆದಿದೆ.ನಿಲೇಶ್ ದಾಲ್ಸಾನಿಯಾ ಎಂಬ ವ್ಯಕ್ತಿಯನ್ನು ಕೇವಲ 18 ದಿನಗಳಲ್ಲೇ ವಜಾಗೊಳಿಸಲಾಗಿತ್ತು. ಬಳಿಕ ಆ 18 ದಿನಗಳ ಸಂಬಳ ಕೇಳಲು ಹೋದಾಗ ರಾಣಿಬಾ ಮತ್ತು ಆಕೆಯ ಸಹಾಯಕರು ಹೊಡೆದು ಗಾಯಗೊಳಿಸಿದ್ದು ಪ್ರಕರಣ ದಾಖಲಾಗಿದೆ.