ದೈಹಿಕ ಸುಖದ ಆಸೆ ತೋರಿಸಿ ಸುಪಾರಿ ನೀಡಿದ ಯುವತಿ

ಶುಕ್ರವಾರ, 8 ಡಿಸೆಂಬರ್ 2023 (11:08 IST)
ಸಹೋದರಿ ವೇಶ್ಯಾವಾಟಿಕೆ ನಡೆಸುತ್ತಿದ್ದಳು.ಆಕೆಯ ಪತಿ ಮದ್ಯವ್ಯಸನಿಯಾಗಿದ್ದ. ಇಬ್ಬರ ಕಾಟ ತಾಳಲಾಗದೆ ಹತ್ಯೆಗೈಯುವ ನಿರ್ಧಾರ ತೆಗೆದುಕೊಂಡಿದ್ದೇನೆ. ಹತ್ಯೆಗಾಗಿ ನೆರೆಯ ಗ್ರಾಮದ ವ್ಯಕ್ತಿ ಪ್ರಾಠಿ ಸಿಂಗ್‌ಗೆ ಲೈಂಗಿಕ ಸುಖ ನೀಡುವ ಆಸೆ ತೋರಿಸಿ ದಂಪತಿಗಳನ್ನು ಹತ್ಯೆಗೈಯುವಂತೆ ಒಪ್ಪಿಸಿದ್ದೆ ಎಂದು ಸಂಚಿನಲ್ಲಿ ಭಾಗಿಯಾದ ಯುವತಿ ಒಪ್ಪಿಕೊಂಡಿದ್ದಾಳೆ.
 
ನನ್ನಿಂದ ಸೆಕ್ಸ್ ಸುಖ ಬೇಕಾದ್ರೆ ಸಹೋದರಿ ಮತ್ತು ಆಕೆಯ ಪತಿಯನ್ನು ಹತ್ಯೆ ಮಾಡುವಂತೆ ಸುಪಾರಿ ನೀಡಿದ ಯುವತಿ ಮತ್ತು ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
 
ಪೊಲೀಸ್ ಮೂಲಗಳ ಪ್ರಕಾರ, ಡಿಸೆಂಬರ್ 2 ರಂದು ದೆಹಲಿಯ ಎರಡು ಪ್ರತ್ಯೇಕ ಬಡಾವಣೆಗಳಲ್ಲಿ ವ್ಯಕ್ತಿಯ ಮತ್ತು ಮಹಿಳೆಯೊಬ್ಬಳ ಮೃತ ದೇಹಗಳು ಪತ್ತೆಯಾಗಿದ್ದವು. ತನಿಖೆ ಕೈಗೊಂಡ ಪೊಲೀಸರಿಗೆ ಹತ್ಯೆಯಾದ ಮಹಿಳೆಯ ಸಹೋದರಿಯನ್ನು ವಿಚಾರಣೆಗೆ ಕರೆತಂದಾಗ ಆಕೆಯ ಹೇಳಿಕೆಗಳಲ್ಲಿ ಸತ್ಯವಿಲ್ಲವೆಂದೆನಿಸಿದಾಗ ಮತ್ತಷ್ಟು ಕಠಿಣ ವಿಚಾರಣೆ ನಡೆಸಿದಾಗ ಹತ್ಯೆಯ ಹಿಂದಿನ ಸಂಚು ಬಹಿರಂಗವಾಗಿದೆ.
 
ಪ್ರಾಠಿ ಸಿಂಗ್ ತನ್ನ ಸಹಚರರೊಂದಿಗೆ ಸೇರಿ ಮಹಿಳೆ ಸೀಮಾ ಮತ್ತು ಆಕೆಯ ಪತಿ ಜುಗಲ್ ಎನ್ನುವವರನ್ನು ಹತ್ಯೆ ಮಾಡಿ ಮೃತದೇಹಗಳನ್ನು ಬೇರೆ ಬೇರೆ ಪ್ರದೇಶಗಳಲ್ಲಿ ಬಿಸಾಡಿ ತೆರಳಿ ಪರಾರಿಯಾಗಿದ್ದರು ಎಂದು ಹತ್ಯಾ ಆರೋಪಿ ಯುವತಿ ಹೇಳಿಕೆ ನೀಡಿದ್ದಾಳೆ.
 
ಯುವತಿಯ ವಿರುದ್ಧ ಜೋಡಿ ಕೊಲೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಮತ್ತೊಬ್ಬ ಆರೋಪಿ ಪ್ರಾಠಿ ಸಿಂಗ್‌ ಪತ್ತೆಗಾಗಿ ಜಾಲ ಬೀಸಿದ್ದಾರೆ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ