ಸರಕಾರಿ ನೌಕರರ ಶೇ.50 ರಷ್ಟು ವೇತನ ಹೆಚ್ಚಳ ಘೋಷಿಸಿದ ಕೇಜ್ರಿವಾಲ್ ಸರಕಾರ
ಬುಧವಾರ, 17 ಆಗಸ್ಟ್ 2016 (18:11 IST)
ದೆಹಲಿ ಸರಕಾರದ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಸರಕಾರಿ ಉದ್ಯೋಗಿಗಳ ವೇತನವನ್ನು ಶೇ.50 ರಷ್ಟು ಹೆಚ್ಚಳಗೊಳಿಸಿ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಆದೇಶ ಹೊರಡಿಸಿದ್ದಾರೆ.
ದೆಹಲಿ ಸರಕಾರದ ಸಚಿವ ಸಂಪುಟ ಸರಕಾರಿ ಉದ್ಯೋಗಿಗಳ ವೇತನ ಹೆಚ್ಚಳ ಪ್ರಸ್ತಾವನೆ ಕುರಿತಂತೆ ಚರ್ಚಿಸಿ ಅಂತಿಮವಾಗಿ ಗ್ರೀನ್ ಸಿಗ್ನಲ್ ನೀಡಲಾಯಿತು ಎಂದು ಮೂಲಗಳು ತಿಳಿಸಿವೆ.
ದೆಹಲಿ ಮುಖ್ಯಮಂತ್ರಿ ಕೇಜ್ರಿವಾಲ್ ಸ್ವಾತಂತ್ರೋತ್ಸವದ ದಿನದಂದೇ ಸರಕಾರಿ ಉದ್ಯೋಗಿಗಳ ವೇತನ ಹೆಚ್ಚಳ ಕುರಿತಂತೆ ಘೋಷಿಸಿದ್ದರು. ಸರಕಾರದ ನಿರ್ಧಾರದಿಂದಾಗಿ ಸರಕಾರಿ ನೌಕರರ ಕನಿಷ್ಠ ವೇತನ 14,052 ರೂಪಾಯಿಗಳಿಗೆ ಏರಿಕೆಯಾಗಿದೆ.
ದೆಹಲಿ ಸರಕಾರ 13 ಸದಸ್ಯರ ಸಮಿತಿಯನ್ನು ರಚಿಸಿ ಸರಕಾರಿ ನೌಕರರ ವೇತನ ಕುರಿತಂತೆ ವರದಿ ನೀಡುವಂತೆ ಕೋರಿತ್ತು. ಇದೀಗ ಕಾರ್ಮಿಕ ಸಚಿವಾಲಯ ಸರಕಾರಕ್ಕೆ ವರದಿಯನ್ನು ನೀಡಿದ ಹಿನ್ನೆಲೆಯಲ್ಲಿ ಕೇಜ್ರಿವಾಲ್ ನೇತೃತ್ವದ ಸರಕಾರ ವೇತನ ಹೆಚ್ಚಳಗೊಳಿಸಿ ಆದೇಶ ಹೊರಡಿಸಿದೆ.
ತಾಜಾ ಸುದ್ದಿಗಳನ್ನು ಓದಲು ಮೊಬೈಲ್ ಆಪ್ ಡೌನ್‍ಲೋಡ್ ಮಾಡಿಕೊಳ್ಳಿ