ಆಂಧ್ರ ಪ್ರದೇಶಕ್ಕೆ ಪ್ರಧಾನಿ ಭೇಟಿ: ನಟ ಚಿರಂಜೀವಿಗೆ ವಿಶೇಷ ಆಹ್ವಾನ
ಜುಲೈ 4ರಂದು ಪ್ರಧಾನಿ ನರೇಂದ್ರ ಮೋದಿ ಆಂಧ್ರಪ್ರದೇಶಕ್ಕೆ ಭೇಟಿ ನೀಡುತ್ತಿದ್ದಾರೆ. ಪ್ರಧಾನಿ ಭಾಗವಹಿಸುವ ಕಾರ್ಯಕ್ರಮವೊಂದಕ್ಕೆ ಖ್ಯಾತ ಚಿತ್ರನಟ ಚಿರಂಜೀವಿ ಅವರಿಗೆ ಪ್ರತ್ಯೇಕವಾದ ಆಹ್ವಾನ ನೀಡಲಾಗಿದೆ.
ಜುಲೈ 4ರಂದು ವಿಜಯವಾಡಕ್ಕೆ ಬೆಳಗ್ಗೆ 10.10ಕ್ಕೆ ಪ್ರಧಾನಿ ಮೋದಿ ಬಂದಿಳಿಯಲಿದ್ದಾರೆ. ನಂತರ ಹೆಲಿಕಾಪ್ಟರ್ ಮೂಲಕ ಪಶ್ಚಿಮ ಗೋದಾವರಿ ಜಿಲ್ಲೆಯ ಭೀಮಾವರಂಗೆ ಪ್ರಧಾನಿ ತೆರಳಲಿದ್ದಾರೆ.
ಇಲ್ಲಿ ಆಜಾದಿ ಕಾ ಅಮೃತ ಮಹೋತ್ಸವ ಕಾರ್ಯಕ್ರಮದ ಭಾಗವಾಗಿ ಅಲ್ಲೂರಿ ಸೀತಾರಾಮರಾಜು 125ನೇ ಜಯಂತಿ ಉತ್ಸವದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಳ್ಳುತ್ತಿದ್ದಾರೆ.
ಅಲ್ಲದೇ, 30 ಅಡಿ ಎತ್ತರದ ಸೀತಾರಾಮರಾಜು ಅವರ ವಿಗ್ರಹವನ್ನೂ ಪ್ರಧಾನಿ ಉದ್ಘಾಟಿಸಲಿದ್ದಾರೆ. ಸೀತಾರಾಮರಾಜು 125ನೇ ಜಯಂತಿ ಉತ್ಸವದಲ್ಲಿ ಭಾಗವಹಿಸುವಂತೆ ನಟ ಚಿರಂಜೀವಿ ಅವರಿಗೆ ಕೇಂದ್ರ ಸಚಿವ ಕಿಶನ್ ರೆಡ್ಡಿ ಪ್ರತ್ಯೇಕವಾದ ಆಹ್ವಾನ ನೀಡಿದ್ದಾರೆ.