ಸ್ನೂಪ್ ಗೇಟ್`ಗೆ ಬಳಸಿದ ಗುಪ್ತಚರ ವ್ಯವಸ್ಥೆಯನ್ನ ಸಿಆರ್`ಪಿಎಫ್ ಯೋಧರ ರಕ್ಷಣೆಗೇಕೆ ಬಳಸಲಿಲ್ಲ: ಮೋದಿಗೆ ರಮ್ಯಾ ಪ್ರಶ್ನೆ

ಮಂಗಳವಾರ, 25 ಏಪ್ರಿಲ್ 2017 (14:29 IST)
ಪಾಕಿಸ್ತಾನ ನರಕವಲ್ಲ, ಅಲ್ಲಿಯೂ ಒಳ್ಳೆಯ ಜನರಿದ್ದಾರೆ ಎಂದು ಹೇಳಿದ್ದ ರಮ್ಯಾ ಇದೀಗ ಸಿಆರ್`ಪಿಎಫ್ ಸಿಬ್ಬಂದಿ ಮೇಲೆ ನಡೆದ ನಕ್ಸಲರ ದಾಳಿ ವಿಷಯವಾಗಿ ಪ್ರದಾನಮಂತ್ರಿ ನರೇಂದ್ರಮೋದಿಯನ್ನ ಕಟು ಶಬ್ದಗಳಿಂದ ಪ್ರಶ್ನಿಸಿದ್ದಾರೆ.

ಮೋದಿಜಿ ಸಿಎಂ ಆಗಿದ್ದಾಗ ಸ್ನೂಪ್ ಗೇಟ್`ಗೆ ಬಳಸಿಕೊಂಡ ಗುಪ್ತಚರ ವ್ಯವಸ್ಥೆಯನ್ನ ಸಿಆರ್`ಪಿಎಫ್ ಯೋಧರ ರಕ್ಷಣೆಗೇಕೆ ಬಳಸಲಿಲ್ಲ ಎಂದು ಪ್ರಶ್ನಿಸಿ ಟ್ವೀಟ್ ಮಾಡಿದ್ದಾರೆ.

ಏನಿದು ಸ್ನೂಪ್ ಗೇಟ್..?: ಗುಜರಾತ್`ನ ಗುಪ್ತಚರ ಸಂಸ್ಥೆ ಮತ್ತು ಪೊಲೀಸ್ ವ್ಯವಸ್ಥೆಯನ್ನ ಬಳಸಿಕೊಂಡು ಅಂದಿನ ಗೃಹ ಸಚಿವ ಅಮಿತ್ ಶಾ ಯುವತಿಯೊಬ್ಬಳ ಮೇಲೆ ನಿಗಾ ಇಟ್ಟಿದ್ದರು ಎಂಬ ಆರೋಪ ಕೇಳಿಬಂದಿತ್ತು.
ನವೆಂಬರ್ 2013ರಲ್ಲಿ ಕೋಬ್ರಾಪೋಸ್ಟ್ ಮತ್ತು ಗುಲೈಲ್  ಕೆಲ ಆಡಿಯೋ ತುಣುಕುಗಳನ್ನ `ದಿ ಸ್ಟಾಲ್ಕರ್’ ಹೆಸರಿನಲ್ಲಿ ರಿಲೀಸ್ ಮಾಡಿತ್ತು. ಆಡಿಯೋದಲ್ಲಿ ಅಮಿತ್ ಶಾ ಬೆಂಗಳೂರಿನ ಮಹಿಳೆ ಮೇಲೆ ಕಣ್ಗಾವಲಿಗೆ ಆದೇಶ ಮಾಡಿದ್ದು, ಸಾಹೇಬರ ಆದೇಶದಂತೆ ಈ ಕಣ್ಗಾವಲು ಆದೇಶ ಮಾಡಿದ್ದರು ಎಂಬ ಆರೋಪ ಕೇಳಿಬಂದಿತ್ತು.

ಈ ಸೂಚನೆ ಮೇರೆಗೆ ಯುವತಿಯನ್ನ ಮಾಲ್, ರೆಸ್ಟೋರೆಂಟ್, ಜಿಮ್`ಗಳಲ್ಲಿ ಹಿಂಬಾಲಿಸಿ ವಿಮಾನ, ಹೋಟೆಲ್ ಬುಕ್ಕಿಂಗ್, ತಾಯಿಯನ್ನ ಭೇಟಿಯಾಗಲು ಆಸ್ಪತ್ರೆಗೆ ತೆರಳಿದ್ದ ಎಲ್ಲ ಮಾಹಿತಿಯನ್ನ ಪೊಲೀಸರು ಸಂಗ್ರಹಿಸಿದ್ರು ಎಂಬ ಆರೋಪ ಕೇಳಿಬಂದಿತ್ತು. ಅಮಿತ್ ಶಾ ಸಂಬೋಧಿಸಿದ ಸಾಹೇಬ್ ಬೇರಾರೂ ಅಲ್ಲ ನರೇಂದ್ರಮೋದಿ ಎಂದು ಕಾಂಗ್ರೆಸ್ ಆರೋಪಿಸಿತ್ತು.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

The kind of intel machinery that was used in 'Snoopgate' when Modiji was CM could not be put in place to protect our CRPF jawans?Priorities.

— Divya Spandana/Ramya (@divyaspandana) April 24, 2017

ವೆಬ್ದುನಿಯಾವನ್ನು ಓದಿ