ಸಹಾಯ ಮಾಡುವ ಸೋಗಿನಲ್ಲಿ ರೇಪ್ ಮಾಡಿದ್ರು
ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಮಹಿಳೆಯ ಪತಿಯನ್ನು ಬಂಧಿಸಿ ಜೈಲಿಗಟ್ಟಲಾಗಿತ್ತು. ಆತನನ್ನು ಬಿಡಿಸಿಕೊಂಡು ಬರಲು ಮಹಿಳೆ ವಕೀಲರ ಸಹಾಯ ಕೋರಿದ್ದಳು. ಅದರಂತೆ ಸಹಾಯ ಮಾಡುವುದಾಗಿ ಕಚೇರಿಗೆ ಕರೆಸಿಕೊಂಡ ವಕೀಲ ತನ್ನ ಇಬ್ಬರು ಸಹಚರರೊಂದಿಗೆ ಸೇರಿಕೊಂಡು ಅತ್ಯಾಚಾರವೆಸಗಿದ್ದಾನೆ.
ಈ ಘಟನೆಯ ವಿಡಿಯೋ ಮಾಡಿ ಮಹಿಳೆಗೆ ಯಾರಿಗೂ ಹೇಳದಂತೆ ಬೆದರಿಕೆ ಹಾಕಿದ್ದಾರೆ. ಮಹಿಳೆ ಪೊಲೀಸರಿಗೆ ದೂರು ನೀಡಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.