ನವದೆಹಲಿ: ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರ್ಕಾರಕ್ಕೆ ಬಹುಶಃ ಇದು ಕೊನೆಯ ಸಚಿವ ಸಂಪುಟ ವಿಸ್ತರಣೆ. ಅದು ಇಂದು ನಡೆಯಲಿದ್ದು, 10.30 ಕ್ಕೆ 9 ಹೊಸ ಸಚಿವರು ಮೋದಿ ಸರ್ಕಾರಕ್ಕೆ ಸೇರ್ಪಡೆಯಾಗಲಿದ್ದಾರೆ.
ಇಂದು 10.30 ಕ್ಕೆ 9 ನೂತನ ಸಚಿವರಿಗೆ ರಾಷ್ಟ್ರಪತಿ ರಮಾನಾಥ್ ಕೋವಿಂದ್ ಪ್ರಮಾಣ ವಚನ ಬೋಧಿಸಲಿದ್ದಾರೆ. ಕರ್ನಾಟಕದಿಂದ ಉತ್ತರ ಕರ್ನಾಟಕ ಸಂಸದ ಅನಂತ ಕುಮಾರ್ ಹೆಗ್ಡೆಗೆ ಸಚಿವ ಸ್ಥಾನ ಸಿಕ್ಕಿದೆ.
ಎಲ್ಲಾ ಸಚಿವರೂ ಬಿಜೆಪಿ ಸಂಸದರು ಎನ್ನುವುದು ವಿಶೇಷ. ಜೆಡಿಯು ಅಥವಾ ಎಐಎಡಿಎಂಕೆ ಸಂಸದರಿಗೂ ಮೋದಿ ಸಂಪುಟದಲ್ಲಿ ಸ್ಥಾನ ಸಿಕ್ಕೀತು ಎಂಬ ನಿರೀಕ್ಷೆ ಹುಸಿಯಾಗಿದೆ. ಪ್ರಮಾಣ ವಚನ ಸಂದರ್ಭದಲ್ಲಿ ಬಿಜೆಪಿಯ ಘಟಾನುಘಟಿ ನಾಯಕರು ಭಾಗವಹಿಸುವ ನಿರೀಕ್ಷೆಯಿದೆ.
ನೂತನ ಸಚಿವರು ಯಾರೆಲ್ಲಾ?: ಆರ್ ಕೆ ಸಿಂಗ್ (ಬಿಹಾರ), ಹರ್ದೀಪ್ ಸಿಂಗ್ ಪುರಿ (ಮಾಜಿ ರಾಯಭಾರಿ), ಶಿವ ಪ್ರತಾಪ್ ಶುಕ್ಲಾ (ಉತ್ತರ ಪ್ರದೇಶ), ಸತ್ಯಪಾಲ್ ಸಿಂಗ್ (ಭಾಗ್ ಪತ್), ಆಲ್ಫೋನ್ಸ್ ಕಣ್ಣಾಂತಮನಮ್ (ಮಾಜಿ ಅಧಿಕಾರಿ), ಅಶ್ವಿನಿ ಕುಮಾರ್ ಚೌಬೆ (ಬಿಹಾರ), ಅನಂತ ಕುಮಾರ ಹೆಗ್ಡೆ (ಉತ್ತರ ಕನ್ನಡ), ಗಜೇಂದ್ರ ಸಿಂಗ್ ಶೆಖಾವತ್ (ಜೋಧ್ ಪುರ್), ಮತ್ತು ವೀರೇಂದ್ರ ಕುಮಾರ್ (ಮಧ್ಯ ಪ್ರದೇಶ).