ಮಹಿಳೆಯರಿಗೆ ಅಗ್ನಿವೀರ್‌ ನೇಮಕಾತಿ ಪ್ರಕ್ರಿಯೆ : ಅರ್ಹತೆ ಏನು?

ಗುರುವಾರ, 11 ಆಗಸ್ಟ್ 2022 (11:28 IST)
ನವದೆಹಲಿ : ಅಗ್ನಿಪಥ್ ಯೋಜನೆಯಡಿ ಕರ್ನಾಟಕದಲ್ಲಿ ನವೆಂಬರ್ 1ರಿಂದ 3ರವರೆಗೆ ಮಿಲಿಟರಿ ಪೊಲೀಸರ ಸಾಮಾನ್ಯ ಕರ್ತವ್ಯ ವರ್ಗದ ಮಹಿಳಾ ಅಭ್ಯರ್ಥಿಗಳ ನೇಮಕಾತಿ ಪ್ರಕ್ರಿಯೆ ಆರಂಭವಾಗಲಿದೆ.
 
ಈ ನೇಮಕಾತಿ ಪ್ರಕ್ರಿಯೆಯು ಪ್ರಧಾನ ಕಛೇರಿ ನೇಮಕಾತಿ ವಲಯದ ಆಶ್ರಯದಲ್ಲಿ ಬೆಂಗಳೂರಿನ ಮಾಣಿಕ್ಷಾ ಪರೇಡ್ ಮೈದಾನದಲ್ಲಿ ನಡೆಯಲಿದೆ ರಕ್ಷಣಾ ಇಲಾಖೆ ತಿಳಿಸಿದೆ.
ಕರ್ನಾಟಕ, ಕೇರಳ ಮತ್ತು ಕೇಂದ್ರಾಡಳಿತ ಪ್ರದೇಶವಾದ ಲಕ್ಷದ್ವೀಪ ಮತ್ತು ಮಾಹೆಯ ಮಹಿಳಾ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ.

ಅರ್ಜಿ ಸಲ್ಲಿಸುವವರು 17 ವರ್ಷ 5 ತಿಂಗಳು ಮೀರಿರಬೇಕು ಮತ್ತು 23 ವರ್ಷದ ಒಳಗಿನವರಾಗಿರಬೇಕು.  ಅಭ್ಯರ್ಥಿಗಳು 162 ಮೀಟರ್ ಎತ್ತರ ಹೊಂದಿರಬೇಕು. 10ನೇ ತರಗತಿ ಪರೀಕ್ಷೆಯನ್ನು ಶೇ.45 ಅಂಕದೊಂದಿಗೆ ಉತ್ತೀರ್ಣರಾಗಿಬೇಕು ಮತ್ತು ಎಲ್ಲ ವಿಷಯದಲ್ಲಿ ಶೇ.35 ಅಂಕ ಪಡೆದಿರಬೇಕು. ಆಗಸ್ಟ್ 9 ರಿಂದ ನೋಂದಣಿ ಪ್ರಕ್ರಿಯೆ ಆರಂಭವಾಗಿದ್ದು, ಸೆಪ್ಟೆಂಬರ್ 7ಕ್ಕೆ ಕೊನೆಯಾಗಲಿದೆ.

ಪರೀಕ್ಷೆಯ ಸಮಯದಲ್ಲಿ ಅಭ್ಯರ್ಥಿಗಳು 1.6 ಕಿ.ಮೀ ಓಡಬೇಕಾಗುತ್ತದೆ. 10 ಅಡಿ ಉದ್ದ ಜಿಗಿತ, 3 ಅಡಿ ಎತ್ತರ ಜಿಗಿತದಲ್ಲಿ ತೇರ್ಗಡೆಯಾದವರಿಗೆ ಮೆಡಿಕಲ್ ಪರೀಕ್ಷೆ ನಡೆಸಲಾಗುತ್ತದೆ. ಹೆಚ್ಚಿನ ವಿವರಗಳಿಗೆ www.joinindianarmy.nic.inಭೇಟಿ ನೀಡಬಹುದು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ