ಭೋಪಾಲ್ : ಮಧ್ಯಪ್ರದೇಶದಲ್ಲಿ ತಾಲೀಮು ನಡೆಸುತ್ತಿದ್ದ ವೇಳೆ ಪತನಗೊಂಡಿದ್ದ ಸುಖೋಯ್-30 ಹಾಗೂ ಮಿರಾಜ್-2000 ಭಾರತೀಯ ಯುದ್ಧ ವಿಮಾನಗಳ ಬ್ಲ್ಯಾಕ್ಬಾಕ್ಸ್ (ಡೇಟಾ ರೆಕಾರ್ಡರ್) ಭಾನುವಾರ ಪತ್ತೆಯಾಗಿದೆ.
ಸುಖೋಯ್-30 ಹಾಗೂ ಮಿರಾಜ್-2000 ಎರಡು ವಿಮಾನಗಳು ಮಧ್ಯಪ್ರದೇಶದ ಗ್ವಾಲಿಯರ್ ವಾಯು ನೆಲೆಯಿಂದ ಟೇಕಾಫ್ ಆಗಿ ತಾಲೀಮು ನಡೆಸುತ್ತಿದ್ದವು.
ಬೆಳಗ್ಗೆ 5:30ರ ಸುಮಾರಿಗೆ ಆಗಸದಲ್ಲಿ ಹಾರಾಟ ನಡೆಸುತ್ತಿದ್ದಂತೆ ಮಧ್ಯಪ್ರದೇಶದ ಮೊರೆನಾ ಬಳಿ ಪರಸ್ಪರ ಡಿಕ್ಕಿ ಹೊಡೆದುಕೊಂಡು ಪತನಗೊಂಡಿದ್ದವು. ಪರಿಣಾಮ ಮಿರಾಜ್-2000 ಯುದ್ಧ ವಿಮಾನದಲ್ಲಿದ್ದ ಪೈಲಟ್ ಮೃತಪಟ್ಟಿದ್ದರು.
ಘಟನೆ ಬಳಿಕ ಮಿರಾಜ್ ವಿಮಾನದ ಬ್ಲ್ಯಾಕ್ ಬಾಕ್ಸ್ ಪತ್ತೆಯಾಗಿದೆ. ಸುಖೋಯ್ ವಿಮಾನದ ಬ್ಲ್ಯಾಕ್ ಬಾಕ್ಸ್ನ ಒಂದು ಭಾಗ ಪತ್ತೆಯಾಗಿದ್ದು, ಉಳಿದ ಭಾಗವು ಭರತ್ ಪುರದಲ್ಲಿ ಬಿದ್ದಿರಬಹುದು ಎಂದು ಮೊರೆನಾ ಪೊಲೀಸ್ ವರಿಷ್ಠಾಧಿಕಾರಿ ಅಶುತೋಷ್ ಬಗ್ರಿ ಹೇಳಿದ್ದಾರೆ.