ದೆಹಲಿಯಲ್ಲಿ ಹೆಚ್ಚುತ್ತಲೇ ಇದೆ ವಾಯುಮಾಲಿನ್ಯ
ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಮಾಲಿನ್ಯ ಪ್ರಮಾಣ ದಿನ ದಿನಕ್ಕೂ ಹೆಚ್ಚಾಗುತ್ತಲೇ ಇದೆ. ಸೋಮವಾರ ಬೆಳಗ್ಗೆ 8 ಗಂಟೆಯ ವೇಳೆಯಲ್ಲಿ ದೆಹಲಿಯನ್ನು ದಟ್ಟ ಹೊಗೆ ಆವರಿಸಿತ್ತು.
ನೂರು ಮೀಟರ್ ದೂರದವರೆಗೂ ದೃಷ್ಟಿಗೋಚರವಿರಲಿಲ್ಲ. ನಸುಕಿನಲ್ಲೂ 350 ರಿಂದ 400 ರವರೆಗೆ ಏರ್ ಕ್ವಾಲಿಟಿ ಇಂಡೆಕ್ಸ್ ದಾಖಲಾಗಿದೆ. ಬೆಳಗ್ಗೆ 7 ಗಂಟೆಯ ವೇಳೆಯಲ್ಲಿ ಒಟ್ಟಾರೆ ದೆಹಲಿಯ ಏರ್ ಇಂಡೆಕ್ಸ್ ಕ್ವಾಲಿಟಿ 398 ರಷ್ಟು ದಾಖಲಾಗಿದೆ ಎಂದು ಕೇಂದ್ರೀಯ ಮಾಲಿನ್ಯ ನಿಯಂತ್ರಣ ಮಂಡಳಿ ತಿಳಿಸಿದೆ.