ಗಾಂಧಿನಗರ : ನಕಲಿ ಮದ್ಯ ಸೇವಿಸಿ 28 ಮಂದಿ ಮೃತಪಟ್ಟ ಘಟನೆ ಗುಜರಾತ್ನ ಬೊಟಾಡ್ ಜಿಲ್ಲೆಯಲ್ಲಿ ನಡೆದಿದೆ.
ಗುಜರಾತ್ನ ಬೊಟಾಡ್ನ ರೋಜಿಡ್ ಗ್ರಾಮ ಸೇರಿದಂತೆ ಇತರ ಸುತ್ತಮುತ್ತಲಿನ ಗ್ರಾಮಗಳಲ್ಲಿ ವಾಸಿಸುವ ಜನರು ಅನಾರೋಗ್ಯದಿಂದ ಬಳಲುತ್ತಿದ್ದರು.
ಈ ಹಿನ್ನೆಲೆಯಲ್ಲಿ ಅವರೆಲ್ಲರನ್ನು ಬರ್ವಾಲಾ ಪ್ರದೇಶ ಮತ್ತು ಬೊಟಾಡ್ ಪಟ್ಟಣಗಳ ಸರ್ಕಾರಿ ಆಸ್ಪತ್ರೆಗಳಿಗೆ ದಾಖಲಿಸಲಾಗಿತ್ತು. ದಾಖಲಾದವರೆಲ್ಲರೂ ಮದ್ಯವನ್ನು ಸೇವಿಸಿರುವುದು ಆಸ್ಪತ್ರೆಯಲ್ಲಿ ಬೆಳಕಿಗೆ ಬಂದಿದೆ.
ಪ್ರಸ್ತುತ 45ಕ್ಕೂ ಅಧಿಕ ಜನರು ಭಾವನಗರ ಬೊಟಾಡ್ ಮತ್ತು ಅಹಮದಾಬಾದ್ನ ಆಸ್ಪತ್ರೆಗಳಲ್ಲಿ ದಾಖಲಾಗಿದ್ದಾರೆ. ಆದರೆ ಚಿಕಿತ್ಸೆ ಫಲಕಾರಿಯಾಗದೇ 28 ಮಂದಿ ಸಾವನ್ನಪ್ಪಿದ್ದಾರೆ. ಅವರಲ್ಲಿ 22 ಮಂದಿ ಬೊಟಾಡ್ ಜಿಲ್ಲೆಯ ವಿವಿಧ ಗ್ರಾಮಗಳಿಗೆ ಸೇರಿವರಾಗಿದ್ದರೆ, 6 ಮಂದಿ ನೆರೆಯ ಅಹಮದಾಬಾದ್ ಜಿಲ್ಲೆಯವರಾಗಿದ್ದಾರೆ.
ಈ ಬಗ್ಗೆ ಗುಜರಾತ್ನ ಪೊಲೀಸ್ ಮಹಾನಿರ್ದೇಶಕ ಆಶಿಶ್ ಭಾಟಿಯಾ ಗಾಂಧಿ ಈ ಮದ್ಯವು ಅತ್ಯಂತ ವಿಷಕಾರಿ ಮೀಥೈಲ್ ಆಲ್ಕೋಹಾಲ್ನಿಂದ ತಯಾರಾಗಿದೆ ಎಂದು ತಿಳಿಸಿದ್ದಾರೆ.