ದೆಹಲಿಯಲ್ಲಿ ಪಟಾಕಿ ಮಾರಾಟಕ್ಕೆ ಅನುಮತಿ ನೀಡಿ : ಸ್ಟಾಲಿನ್

ಗುರುವಾರ, 13 ಅಕ್ಟೋಬರ್ 2022 (10:21 IST)
ನವದೆಹಲಿ : ಈ ಬಾರಿಯ ದೀಪಾವಳಿ ಹಬ್ಬಕ್ಕೆ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಪಟಾಕಿ ಮಾರಾಟ ಮಾಡಲು ಅನುಮತಿ ನೀಡುವಂತೆ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರಿಗೆ ತಮಿಳುನಾಡು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಅವರು ಪತ್ರ ಬರೆದಿದ್ದಾರೆ.

ತಮಿಳುನಾಡಿನ ಶಿವಕಾಶಿಗೆ ಶೇ.70ರಷ್ಟು ವಾರ್ಷಿಕ ಆದಾಯ ದೀಪಾವಳಿ ಹಬ್ಬದ ಸಂದರ್ಭದಲ್ಲಿ ಮಾರಾಟವಾಗುವ ಪಟಾಕಿಯಿಂದ ಬರುತ್ತದೆ ಎಂದು ಸಿಎಂ ಸ್ಟಾಲಿನ್ ಹೇಳಿದ್ದಾರೆ.

ತಮಿಳುನಾಡಿನ ವಿರುದುನಗರ ಜಿಲ್ಲೆಯಲ್ಲಿರುವ ಶಿವಕಾಶಿ ನಗರವು ಭಾರತದಲ್ಲಿರುವ ಪಟಾಕಿ ತಯಾರಕರ ಕೇಂದ್ರವಾಗಿದೆ ಮತ್ತು 6.5 ಲಕ್ಷ ಕುಟುಂಬಗಳು ನೇರವಾಗಿ ಮತ್ತು ಪರೋಕ್ಷವಾಗಿ ಈ ಉದ್ಯೋಗವನ್ನೇ ತಮ್ಮ ಜೀವನೋಪಾಯವಾಗಿ ಅವಲಂಬಿಸಿದೆ. 

ಈ ನಡುವೆ ದೆಹಲಿ ಸರ್ಕಾರವು ಸೆಪ್ಟೆಂಬರ್ 7 ರಿಂದಲೇ ಎಲ್ಲಾ ರೀತಿಯ ಪಟಾಕಿಗಳ ಉತ್ಪಾದನೆ, ಸಂಗ್ರಹಣೆ, ಮಾರಾಟ ಮತ್ತು ಬಳಕೆಯನ್ನು ನಿಷೇಧಿಸಿದೆ. ಪಟಾಕಿ ಮೇಲಿನ ಈ ನಿಷೇಧವು 2023ರ ಜನವರಿ 1ರವರೆಗೂ ಇರಲಿದೆ. 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ