ಅಂಬರೀಶ್‌ಗೆ ಕೋಕ್: ಚಿತ್ರೀಕರಣ ಸ್ಥಗಿತಗೊಳಿಸಿ ಪ್ರತಿಭಟನೆ

ಸೋಮವಾರ, 20 ಜೂನ್ 2016 (10:14 IST)
ಸಚಿವ ಸಂಪುಟದಿಂದ ಅಂಬರೀಶ್ ಅವರಿಗೆ ಕೋಕ್ ನೀಡಿದ್ದನ್ನು ಖಂಡಿಸಿ ಚಿತ್ರೋದ್ಯಮ ಅವರ ಬೆಂಬಲಕ್ಕೆ ನಿಂತಿದೆ. ಕೆಲ ನಿರ್ಮಾಪಕರು ಚಿತ್ರೀಕರಣ ಬಂದ್ ಮಾಡಿ ಪ್ರತಿಭಟನೆ ನಡೆಸಿದ್ದಾರೆ.
 
ಕೆ. ಮಂಜು ನಿರ್ಮಾಣದ 'ಸಂತು ಸ್ಟ್ರೇಟ್ ಫಾರ್ವರ್ಡ್', 'ಸ್ಮೈಲ್ ಪ್ಲೀಸ್' ಸಿನಿಮಾ ಶೂಟಿಂಗ್ ಸ್ಥಗಿತಗೊಂಡಿದೆ.  ಈ ಎರಡು ಚಿತ್ರ ಹೊರತು ಉಳಿದ ಚಿತ್ರದ ಶೂಟಿಂಗ ನಡೆಯುತ್ತಿದೆ. 
 
ಬಾಲಾಜಿ ಸ್ಟುಡಿಯೋಗೆ ಬೀಗ ಹಾಕಿ  ಪ್ರತಿಭಟನೆ ನಡೆಸಲಾಗುತ್ತಿದೆ. 
 
 
ವಾಣಿಜ್ಯ ಮಂಡಳಿಯಲ್ಲಿ 11.30ಕ್ಕೆ ಸಭೆಯನ್ನು ಕರೆಯಲಾಗಿದ್ದು ಮುಂದಿನ ಹೆಜ್ಜೆ ಕುರಿತು ನಿರ್ಧರಿಸಲಾಗುತ್ತದೆ. ಚಿತ್ರೋದ್ಯಮವನ್ನು ಬಂದ್ ಮಾಡಿ ಪ್ರತಿಭಟನೆ ನಡೆಸಬೇಕೋ ಎಂಬ ಬಗ್ಗೆ ಸಭೆಯಲ್ಲಿ  ತೀರ್ಮಾನ ಕೈಗೊಳ್ಳಲಾಗುವುದು. 
 
ಸಚಿವ ಅಂಬರೀಶ್ ಅವರ ರಾಜಕೀಯ ಜೀವನದಲ್ಲಿ ಯಾವುದೇ ಕಪ್ಪು ಚುಕ್ಕೆಯಿಲ್ಲ. ಯಾವುದೇ ಭ್ರಷ್ಟಾಚಾರ ಹಗರಣದಲ್ಲಿ ಭಾಗಿಯಾಗಿಲ್ಲವಾದರೂ ಅವರನ್ನು ಅನಗತ್ಯವಾಗಿ ಸಚಿವ ಸ್ಥಾನದಿಂದ ಹೊರಹಾಕಲಾಗಿದೆ ಎಂದು ಹಲವು ಚಲನಚಿತ್ರ ನಟರು ಭಾನುವಾರ ಆಕ್ರೋಶ ವ್ಯಕ್ತಪಡಿಸಿದ್ದರು.
 
ಸಚಿವ ಸಂಪುಟದಿಂದ ಅಂಬರೀಶ್‌‍ರನ್ನು ಕೈಬಿಟ್ಟಿರುವುದನ್ನು ವಿರೋಧಿಸಿ ನಿನ್ನೆ ನಡೆದ ಪ್ರತಿಭಟನೆಯಲ್ಲಿ ಅಂಬರೀಶ್ ಅಭಿಮಾನಿಯೊಬ್ಬ ಆತ್ಮಹತ್ಯೆಗೆ ಯತ್ನಿಸಿದ್ದ. ತಕ್ಷಣ ಆತನನ್ನು ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ನೀಡಲಾಯಿತು. 

ಪಡಿಸಲಿ, ಇಲ್ಲವಾದರೆ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಲಿ ಎಂದು ಅವರು ಸವಾಲು ಹಾಕಿದ್ದಾರೆ.

ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ