ಇದಕ್ಕೆ ಪುಷ್ಟೀ ನೀಡುವಂತೆ ಸಿಕ್ಕಿಂ ಡೊಕ್ಲಾಮ್ ಗಡಿಯಲ್ಲಿ ಸೈನಿಕರ ನಡುವಿನ ಮುಖಾಮುಖಿ ಬಳಿಕ ಸ್ಥಗಿತವಾಗಿದ್ದ ದ್ವಿಪಕ್ಷೀಯ ಮಾತುಕತೆಗೆ ಚೀನಾ ಒಲವು ತೋರಿಸಿದೆ. ಈ ವಾರಾಂತ್ಯದಲ್ಲಿ ಬೀಜಿಂಗ್‌ನಲ್ಲಿ ನಡೆಯಲಿರುವ ಬ್ರಿಕ್ಸ್ ರಾಷ್ಟ್ರಗಳ ಭದ್ರತಾ ಸಲಹೆಗಾರರ ಸಮಾವೇಶದ ಸಂದರ್ಭದಲ್ಲಿ ಭಾರತ-ಚೀನಾ ದ್ವಿಪಕ್ಷೀಯ ಮಾತುಕತೆಗೆ ವೇದಿಕೆ ಸಿದ್ಧಪಡಿಸಲಾಗುತ್ತಿದೆ. ಸಮಾವೇಶದಲ್ಲಿ ಪಾಲ್ಗೊಳ್ಳಲಿರುವ ಭಾರತದ ಭದ್ರತಾ ಸಲಹೆಗಾರ ಅಜಿತ್ ಧೋವಲ್ ಹಾಗೂ ಚೀನಿ ವಿದೇಶಾಂಗ ಕೌನ್ಸಿಲರ್ ಯಾಂಗ್ ಜಿಯೆಚಿ ನಡುವೆ ದ್ವಿಪಕ್ಷೀಯ ಮಾತುಕತೆ ನಡೆಯುವ ಸಾಧ್ಯತೆ ಇದೆ ಎಂದು ಚೀನಾ ಹೇಳಿದೆ.