ಮಹಾತ್ಮಾ ಗಾಂಧಿ ವಿರುದ್ಧ ಹೇಳಿಕೆ ನೀಡಿದ ಅಮಿತ್ ಶಾ ಕ್ಷಮೆಯಾಚಿಸಲಿ: ಮಮತಾ
ಶನಿವಾರ, 10 ಜೂನ್ 2017 (15:38 IST)
ರಾಷ್ಟ್ರಪಿತ ಮಹಾತ್ಮಾಗಾಂಧಿಯವರ ಬಗ್ಗೆ ಅವಹೇಳನಾಕಾರಿ ಹೇಳಿಕೆ ನೀಡಿದ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ತಮ್ಮ ಹೇಳಿಕೆಯನ್ನು ಹಿಂಪಡೆದು ದೇಶದ ಕ್ಷಮೆಯಾಚಿಸಬೇಕು ಎಂದು ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಒತ್ತಾಯಿಸಿದ್ದಾರೆ.
ಅಮಿತ್ ಶಾ ಉದ್ದೇಶಪೂರ್ವಕವಾಗಿ ಮಹಾತ್ಮಾ ಗಾಂಧಿ ಕುರಿತಂತೆ ಹೇಳಿಕೆ ನೀಡಿರುವುದು ದುರದೃಷ್ಟಕರ ಮತ್ತು ಅನೈತಿಕವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಗಾಂಧೀಜಿಯವರು ರಾಷ್ಟ್ರದ ಪಿತಾಮಹರಾಗಿದ್ದಾರೆ ಮತ್ತು ಅವರು ಪ್ರಪಂಚದ ಐಕಾನ್ ಆಗಿದ್ದಾರೆ, ಕೇವಲ ಅಧಿಕಾರದಲ್ಲಿದ್ದೇವೆ ಎಂದ ಮಾತ್ರಕ್ಕೆ ಅಮಿತ್ ಶಾ ಏನು ಬೇಕಾದರೂ ಹೇಳಬಹುದು ಎನ್ನುವುದು ಸರಿಯಲ್ಲ ಎಂದು ವಾಗ್ದಾಳಿ ನಡೆಸಿದ್ದಾರೆ.
ನಾವು ಸಾರ್ವಜನಿಕ ಜೀವನದಲ್ಲಿ ನಮ್ಮ ರಾಷ್ಟ್ರದ ಮತ್ತು ಪ್ರಪಂಚದ ಪ್ರತಿಷ್ಠಿತರ ಕುರಿತು ಮಾತನಾಡುವಾಗ, ನಾವು ಯಾವಾಗಲೂ ಭಾಷೆಯೊಂದಿಗೆ ಗೌರವ ಮತ್ತು ಸಂವೇದನೆಯನ್ನು ತೋರಿಸಬೇಕು" ಎಂದು ಹೇಳಿದರು.
ಮಹಾರಾಷ್ಟ್ರ ಗಾಂಧಿಯವರನ್ನು "ಬಹುತ್ ಚಾತುರ್ ಬನಿಯಾ" (ವ್ಯಾಪಾರದ ಜಾತಿ - ಬಹಳ ಬುದ್ಧಿವಂತ ಬನಿಯಾ) ರಾಯ್ಪುರದಲ್ಲಿ ಸಭೆಯಲ್ಲಿ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಹೇಳಿಕೆ ನೀಡಿದ್ದರು.
ವೆಬ್ ದುನಿಯಾ ಫ್ಯಾಂಟಸಿ ಕ್ರಿಕೆಟ್ ಲೀಗ್: ಆಡಿ 2.5 ಲಕ್ಷ ರೂ. ಮೌಲ್ಯದ ಬಹುಮಾನ ಗೆಲ್ಲಿ.. ವೆಬ್ ದುನಿಯಾ ಫ್ಯಾಂಟಸಿ ಲೀಗ್`ನಲ್ಲಿ ಭಾಗವಹಿಸಲು ಈ ಲಿಂಕ್ ಕ್ಲಿಕ್ ಮಾಡಿ..
http://kannada.fantasycricket.webdunia.com/
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.