ಒಮಿಕ್ರಾನ್ ಸೋಂಕಿನ ಹೆಚ್ಚಳ; ಮೋದಿ ಪ್ರವಾಸ ಮುಂದೂಡಿಕೆ ಮುಂದೂಡಿಕೆ

ಬುಧವಾರ, 29 ಡಿಸೆಂಬರ್ 2021 (14:46 IST)
ನವದೆಹಲಿ ; ವಿಶ್ವಾದ್ಯಂತ ಒಮಿಕ್ರಾನ್ ಭೀತಿ ಹೆಚ್ಚಾಗಿದ್ದು, ಕೆಲವು ದೇಶಗಳಲ್ಲಿ ಒಮಿಕ್ರಾನ್ ರೂಪಾಂತರಿ ಪ್ರಕರಣಗಳ ಸಂಖ್ಯೆಯಲ್ಲಿ ತೀವ್ರ ಏರಿಕೆಯಾಗುತ್ತಿದೆ.

ಈ ಹಿನ್ನೆಲೆಯಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಯುಎಇ ಮತ್ತು ಕುವೈತ್ ಪ್ರವಾಸವನ್ನು ಮುಂದೂಡಲಾಗಿದೆ. ಈ ಮೊದಲು ಜನವರಿ 6ರಂದು ಪ್ರಧಾನಿ ಮೋದಿ ಯುಎಇ ಮತ್ತು ಕುವೈತ್ಗೆ ಭೇಟಿ ನೀಡುವುದು ನಿಗದಿಯಾಗಿತ್ತು.

ಸೌತ್ ಬ್ಲಾಕ್ ಮೂಲಗಳ ಪ್ರಕಾರ, ಹೆಚ್ಚುತ್ತಿರುವ ಒಮಿಕ್ರಾನ್ ಪ್ರಕರಣಗಳ ಕಾರಣದಿಂದಾಗಿ ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಯುಎಇ ಭೇಟಿಯನ್ನು ಮುಂದೂಡಲಾಗಿದ್ದು, ಫೆಬ್ರವರಿಯಲ್ಲಿ ಪ್ರವಾಸ ನಡೆಸಲಿದ್ದಾರೆ.

 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ