ಬ್ರಾಹ್ಮಣ ನಿರುದ್ಯೋಗಿ ಯುವಕರಿಗೆ ಸಬ್ಸಡಿ ದರದಲ್ಲಿ ಕಾರು ನೀಡುವ ಯೋಜನೆಗೆ ಚಾಲನೆ ನೀಡಿದ ಆಂಧ್ರ ಸಿಎಂ
ಮಂಗಳವಾರ, 8 ಜನವರಿ 2019 (07:17 IST)
ಹೈದರಾಬಾದ್ : ಬ್ರಾಹ್ಮಣ ಸಮುದಾಯದ ನಿರುದ್ಯೋಗಿ ಯುವಕರಿಗೆ ಸಬ್ಸಡಿ ದರದಲ್ಲಿ ಕಾರು ನೀಡುವ ಯೋಜನೆಗೆ ಆಂಧ್ರ ಸಿಎಂ ಚಂದ್ರಬಾಬು ನಾಯ್ಡು ಅವರು ಚಾಲನೆ ನೀಡಿದ್ದಾರೆ.ಈ ಮೂಲಕ ಅವರು ಮುಂಬರುವ ಲೋಕಸಭೆ ಚುನಾವಣೆಗೆ ಮತದಾರರನ್ನು ಸೆಳೆಯಲು ಭರ್ಜರಿ ಪ್ಲ್ಯಾನ್ ಮಾಡಿದ್ದಾರೆ.
ಬ್ರಾಹ್ಮಣ ಅಭಿವೃದ್ಧಿ ಮಂಡಳಿ ಮೂಲಕ ಜಾರಿಗೆ ತಂದಿರುವ ಈ ಯೋಜನೆಯಲ್ಲಿ ಆಯ್ದ ನಿರುದ್ಯೋಗಿ ಯುವಕರಿಗೆ 30 ಸ್ವಿಫ್ಟ್ ಡಿಜೈರ್ ಕಾರನ್ನು ನೀಡಲಾಗುತ್ತದೆ, ಈ ಕಾರು ವಿತರಣೆಯ ಯೋಜನೆಯು ಸ್ವಯಂ ಉದ್ಯೋಗ ಕಾರ್ಯಕ್ರಮದಡಿ ನಡೆಯುತ್ತಿದೆ.
ಈ ಯೋಜನೆಯಲ್ಲಿ ಬ್ರಾಹ್ಮಣ ಅಭಿವೃದ್ಧಿ ಸಂಘವು ಗರಿಷ್ಠ 2 ಲಕ್ಷ ರೂ. ಸಬ್ಸಿಡಿ ಒದಗಿಸುತ್ತಿದೆ. ಫಲಾನುಭವಿಗಳು. ಶೇ. 10 ರಷ್ಟು ಮೊತ್ತವನ್ನು ಭರಿಸಬೇಕಿದೆ. ಉಳಿದ ಮೊತ್ತವನ್ನು ಆಂಧ್ರ ಬ್ರಾಹ್ಮಣ ಸಹಕಾರ ಕ್ರೆಡಿಟ್ ಸೊಸೈಟಿ ಭರಿಸಲಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ.