ಜನರು ಅಧಿಕಾರಿಗಳಿಗೆ ಕೊಟ್ಟ ಲಂಚದ ಹಣವನ್ನ ವಾಪಸ್ ಕೊಡಿಸುತ್ತೆ ಸರ್ಕಾರ..!
ಸೋಮವಾರ, 5 ಜೂನ್ 2017 (20:42 IST)
ದೇಶದಲ್ಲಿ ಕರ್ನಾಟಕದ ಬಳಿಕ 2ನೇ ಭ್ರಷ್ಟಾಚಾರ ರಾಜ್ಯ ಎಂಬ ಕುಖ್ಯಾತಿಯನ್ನ ಆಂಧ್ರಪ್ರದೇಶ ರಾಜ್ಯ ಗಳಿಸಿದೆ. ಇದು ಆಡಳಿತಾರೂಢ ಟಿಡಿಪಿ ಸರ್ಕಾರಕ್ಕೆ ಮುಜುಗರವನ್ನುಂಟುಮಾಡಿದೆ. ಈ ಕುಖ್ಯಾತಿಯನ್ನ ಗಂಭೀರವಾಗಿ ಪರಿಗಣಿಸಿರುವ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು, ಪೀಪಲ್ ಫಸ್ಟ್ ಸೇವೆಯನ್ನ ಜಾರಿಗೆ ತಂದಿದ್ದಾರೆ.
ಯಾವುದೇ ಸರ್ಕಾರಿ ಅಧಿಕಾರಿ ಲಂಚ ಪಡೆದಾಗ, ಲಂಚ ಕೊಟ್ಟ ಗ್ರಾಹಕರು 1100ಗೆ ಕರೆ ಮಾಡಿ ತಮ್ಮ ನೋವನ್ನ ಹೇಳಿಕೊಳ್ಳಬಹುದಾಗಿದೆ. ಬಳಿಕ ಅಧಿಕಾರಿಗಳೇ ನಿಮ್ಮ ಮನೆಗೆ ಬಂದು ನೀವು ಕೊಟ್ಟ ಲಂಚದ ಹಣ ವಾಪಸ್ ಕೊಡುತ್ತಾರೆ. ಈ ಸೇವೆ ಮೂಲಕ 12 ಮಂದಿ ಸಾರ್ವಜನಿಕರು ತಮ್ಮ ಹಣ ವಾಪಸ್ ಪಡೆದಿದ್ದಾರೆ ಎಂದು ಸಿಎಂ ಚಂದ್ರಬಾಬು ನಾಯ್ಡು ಹೆಮ್ಮೆಯಿಂದ ಘೋಷಿಸಿದ್ದಾರೆ.
ಈ ನೂತನ ಸೇವೆ ಮೂಲಕ ಶೀಘ್ರ ತಡೆಗಟ್ಟಬಹುದು ಎಂಬುದು ಸರ್ಕಾರದ ನಂಬಿಕೆ. ಇದೇವೇಳೆ, ಲಂಚ ಪಡೆದ ಅಧಿಕಾರಿಗಳ ವಿರುದ್ಧ ದೂರು ನೀಡುವವರ ರಕ್ಷಣೆ ಮಾಡುವುದಾಗಿ ಭರವಸೆ ನೀಡಿರುವ ಸರ್ಕಾರ ಎಲ್ಲ ಪ್ರಕರಣಗಳಲ್ಲೂ ಹಣ ವಾಪಸ್ ಕೊಡಿಸುವುದು ಸಾಧ್ಯವಿಲ್ಲ ಎಂದಿದೆ.