ಗೃಹ ಸಚಿವ ಸ್ಥಾನಕ್ಕೆ ರಾಜೀನಾಮೆಯಿತ್ತ ಸಚಿವ ಅನಿಲ್ ದೇಶಮುಖ್
ಈ ಸಂಬಂಧ ಅವರು ಮೊದಲು ಆರೋಪ ನಿರಾಕರಿಸಿ, ಪರಂಬೀರ್ ಸಿಂಗ್ ವಿರುದ್ಧವೇ ಮಾನನಷ್ಟ ಮೊಕದ್ದಮೆ ಹೂಡುವುದಾಗಿ ಎಚ್ಚರಿಕೆ ನೀಡಿದ್ದರು. ಆದರೆ ಇದೀಗ ಸಿಬಿಐ ತನಿಖೆಯ ಕುಣಿಕೆ ಬೀಳುತ್ತಿದ್ದಂತೇ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಅವರ ಸ್ಥಾನಕ್ಕೆ ದಿಲೀಪ್ ವಲ್ಸೆ ಪಾಟೀಲ್ ನೂತನ ಗೃಹಸಚಿವರಾಗಿ ಪದಗ್ರಹಣ ಮಾಡಲಿದ್ದಾರೆ.