ಮಸೀದಿಯಿಂದ ನಮಾಜ್ ನೆನಪಿಸಲು ಆ್ಯಪ್ ಪ್ರಾರಂಭ

ಸೋಮವಾರ, 29 ಆಗಸ್ಟ್ 2022 (07:37 IST)
ಮುಂಬೈ : ನಮಾಜ್ ನೆನಪಿಸಲು ಬಾಂಬೆ ಟ್ರಸ್ಟ್ನ ಜುಮಾ ಮಸೀದಿ, ಅಲ್ ಇಸ್ಲಾಹ್ ಎಂಬ ಮೊಬೈಲ್ ಅಪ್ಲಿಕೇಶನ್ ಪ್ರಾರಂಭಿಸಿದೆ.

ಮಸೀದಿಗಳಲ್ಲಿ ಧ್ವನಿವರ್ಧಕಗಳನ್ನು ಬಳಸಬಾರದು ಎಂದು ಮಹಾರಾಷ್ಟ್ರ ನವನಿರ್ಮಾಣ ಸೇನೆ(ಎಂಎನ್ಎಸ್) ವಿರೋಧಿಸಿತ್ತು. ಈ ಹಿನ್ನೆಲೆಯಲ್ಲಿ ನಮಾಜ್ ಸಮಯದಲ್ಲಿ ತಿಳಿಸಲು ಬಾಂಬೆ ಟ್ರಸ್ಟ್ ಈ ಆ್ಯಪ್ನ್ನು ಪ್ರಾರಂಭಿಸಿದೆ.

ಈ ಆ್ಯಪ್ ದಿನಕ್ಕೆ ಐದು ಬಾರಿ ಪ್ರಾರ್ಥನೆಗೆ ಕರೆ ನೀಡುತ್ತದೆ. ಜೊತೆಗೆ ಪ್ರಾರ್ಥನೆ ಮಾಡಲು ಕರೆಗಳನ್ನು ಲೈವ್ ಸ್ಟ್ರೀಮ್ ಮಾಡಬಹುದಾಗಿದೆ.

ನಮಾಜ್ಗಾಗಿ ಈ ಮೊದಲು ಆ್ಯಪ್ಗಳಿದ್ದವು. ಆದರೆ ಆ ಎಲ್ಲಾ ಆ್ಯಪ್ಗಳಲ್ಲಿ ರೆಕಾರ್ಡ್ ಮಾಡಿದ್ದನ್ನು ಮಾತ್ರ ಪ್ಲೇ ಮಾಡಬಹುದಾಗಿತ್ತು. ಇದರಿಂದಾಗಿ ಬಾಂಬೆ ಟ್ರಸ್ಟ್ ತಂತ್ರಜ್ಞಾನವನ್ನು ಬಳಸಿಕೊಂಡು ಈ ಆ್ಯಪ್ ಪ್ರಾರಂಭಿಸಲಾಗಿದೆ. 

 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ