ತಮಿಳುನಾಡು ಸೇರಿ 4 ರಾಜ್ಯಕ್ಕೆ ರಾಜ್ಯಪಾಲರ ನೇಮಕ

ಶುಕ್ರವಾರ, 10 ಸೆಪ್ಟಂಬರ್ 2021 (08:12 IST)
ನವದೆಹಲಿ, ಸೆ10 :  ತಮಿಳುನಾಡು, ನಾಗಾಲ್ಯಾಂಡ್, ಪಂಜಾಬ್ ಸೇರಿದಂತೆ ನಾಲ್ಕು ರಾಜ್ಯಗಳಿಗೆ ನೂತನ ರಾಜ್ಯಪಾಲರ ನೇಮಕವಾಗಿದೆ. ಆರ್. ಎನ್. ರವಿ ತಮಿಳುನಾಡು ರಾಜ್ಯಪಾಲರಾಗಿ ನೇಮಕಗೊಂಡಿದ್ದಾರೆ.

ಗುರುವಾರ ರಾತ್ರಿ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಈ ಕುರಿತು ಆದೇಶ ಹೊರಡಿಸಿದ್ದಾರೆ. ತಮಿಳುನಾಡು, ಉತ್ತರಾಖಂಡ್, ಪಂಜಾಬ್ ಮತ್ತು ನಾಗಲ್ಯಾಂಡ್ ರಾಜ್ಯಗಳಿಗೆ ಹೊಸ ರಾಜ್ಯಪಾಲರ ನೇಮಕವಾಗಿದೆ.
ಲೆಫ್ಟಿನೆಂಟ್ ಗವರ್ನರ್ ಗುರ್ ಮೀತ್ ಸಿಂಗ್ ಉತ್ತರಾಖಂಡ್ ನೂತನ ರಾಜ್ಯಪಾಲರಾಗಿ ನೇಮಕಗೊಂಡಿದ್ದಾರೆ. ಉತ್ತರಾಖಂಡ್ ರಾಜ್ಯಪಾಲರಾಗಿದ್ದ ಬೇಬಿ ರಾಣಿ ಮೌರ್ಯ ಬುಧವಾರ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು.
2018ರ ಆಗಸ್ಟ್ 6ರಂದು ಬೇಬಿ ರಾಣಿ ಮೌರ್ಯ ಉತ್ತರಾಖಂಡ್ ರಾಜ್ಯಪಾಲರಾಗಿ ಅಧಿಕಾರ ಸ್ವೀಕಾರ ಮಾಡಿದ್ದರು. ವೈಯಕ್ತಿಕ ಕಾರಣಗಳಿಂದಾಗಿ ಅವಧಿಗೂ ಮೊದಲೇ ಬೇಬಿ ರಾಣಿ ಮೌರ್ಯ ರಾಜೀನಾಮೆ ನೀಡಿದ್ದರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ