ಸರ್ಕಾರಿ ಉದ್ಯೋಗಗಳನ್ನು ಕೊಡಿಸುವ ನೆಪದಲ್ಲಿ ಜನರನ್ನು ವಂಚಿಸಿದ ಮಹಿಳೆ ಅರೆಸ್ಟ್

ಶುಕ್ರವಾರ, 27 ನವೆಂಬರ್ 2020 (06:46 IST)
ನವದೆಹಲಿ : ಸರ್ಕಾರಿ ಉದ್ಯೋಗಗಳನ್ನು ಕೊಡಿಸುವ ನೆಪದಲ್ಲಿ 48 ವರ್ಷದ ಮಹಿಳೆಯೊಬ್ಬಳು  ಹಲವು ಜನರನ್ನು ವಂಚಿಸಿದ ಘಟನೆ ದೆಹಲಿಯಲ್ಲಿ ನಡೆದಿದೆ.

ಮಹಿಳೆ ಜನರಿಗೆ ಕೊರೊನಾ ಹಿನ್ನಲೆಯಲ್ಲಿ ನೇಮಕಾಂತಿ ಮಾಡಲು ಸಾಧ್ಯವಾಗದ ಕಾರಣ ದೆಹಲಿ ಸರ್ಕಾರ ಸರ್ಕಾರಿ ಹುದ್ದೆಗಳಿಗೆ ಜನರನ್ನು ನೇಮಕ ಮಾಡಲು ನನ್ನನ್ನು ನೇಮಿಸಿದೆ ಎಂದು ಸುಳ್ಳು ದಾಖಲೆಗಳನ್ನು ನೀಡಿ ಜನರನ್ನು ಡೇಟಾ ಎಂಟ್ರಿ, ಹಣಕಾಸಿನ ಸಂಬಂಧಪಟ್ಟ ಕೆಲಸಗಳ ಅಪಾಯಿಂಟ್ಮೆಂಟ್  ಲೆಟರ್ ನೀಡಿ ಅವರಿಂದ ಕೆಲಸ ಮಾಡಿಸಿಕೊಂಡು ಸಂಬಂಳ ನೀಡುವ ವೇಳೆ ಅವರನ್ನು ಕೆಲಸದಿಂದ ವಜಾಗೊಳಿಸುತ್ತಿದ್ದಳು.

ಈ ಬಗ್ಗೆ ಮಹಿಳೆಯ ವಿರುದ್ಧ ಹಲವು ದೂರುಗಳು ದಾಖಲಾದ ಹಿನ್ನಲೆಯಲ್ಲಿ ಪೊಲೀಸರು ತನಿಖೆ ನಡೆಸಿ ಆರೋಪಿ ಮಹಿಳೆಯನ್ನು ಬಂಧಿಸಿದ್ದಾರೆ ಎನ್ನಲಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ