ದೆಹಲಿ ಎಲ್‌ಜಿಗೆ ಅಧಿಕಾರ: ಹೈಕೋರ್ಟ್ ತೀರ್ಪಿನ ವಿರುದ್ಧ ಕೇಜ್ರಿವಾಲ್ ಸುಪ್ರೀಂಕೋರ್ಟ್ ಮೊರೆ

ಗುರುವಾರ, 1 ಸೆಪ್ಟಂಬರ್ 2016 (10:50 IST)
ರಾಷ್ಟ್ರ ರಾಜಧಾನಿಯಲ್ಲಿ ಲೆಫ್ಟಿನೆಂಟ್ ಗವರ್ನರ್ ನಜೀಬ್ ಜಂಗ್ ಮತ್ತು ಮುಖ್ಯಮಂತ್ರಿ ಕೇಜ್ರಿವಾಲ್ ನಡುವೆ ಜಟಾಪಟಿ ಇನ್ನೂ ಮುಂದುವರಿದಿದೆ. ಎಲ್‌‍ಜಿ ಆಡಳಿತಾತ್ಮಕ ಮುಖ್ಯಸ್ಥ ಎಂದು ಹೈಕೋರ್ಟ್ ತೀರ್ಪು ನೀಡಿದ ಬಳಿಕ ಅರವಿಂದ್ ಕೇಜ್ರಿವಾಲ್ ಸರ್ಕಾರ ಈ ತೀರ್ಪಿನ ವಿರುದ್ಧ ಸುಪ್ರೀಂಕೋರ್ಟ್‌ ಮೆಟ್ಟಿಲು ಹತ್ತಿದೆ. ಎಎಪಿ ಸಚಿವರ ಸಲಹೆ ಮೇಲೆ ದೆಹಲಿ ಎಲ್‌ಜಿ ಕಾರ್ಯನಿರ್ವಹಿಸಬೇಕು ಎಂಬ ವಾದ ಅರ್ಥಹೀನ ಎಂದು ಆಗಸ್ಟ್ 4 ರಂದು ಹೈಕೋರ್ಟ್ ಅಭಿಪ್ರಾಯಪಟ್ಟಿದೆ.
 
ಈ ತೀರ್ಪಿನ ಬಳಿಕ ಲೆ. ಗವರ್ನರ್ ನಜೀಬ್ ಜಂಗ್ ಡೆಲ್ಲಿ ಸಿಎಂ ಕೇಜ್ರಿವಾಲ್ ಕುರಿತು ತಮಗೆ ಮರುಕ ಉಂಟಾಗಿದೆಯೆಂದು ಹೇಳಿ, ಸಂವಿಧಾನವನ್ನು ಅವರು ವ್ಯಾಖ್ಯಾನಿಸಿದ ರೀತಿ ಹಾಸ್ಯಾಸ್ಪದ ಎಂದಿದ್ದರು.
 
ಎಎಪಿ ಸರ್ಕಾರ ಎತ್ತಿದ ಎಲ್ಲಾ ವಿಷಯಗಳನ್ನು ಕೋರ್ಟ್ ತಪ್ಪೆಂದು ಘೋಷಿಸಿದ್ದು, ಎಎಪಿ ಸುಪ್ರೀಂಕೋರ್ಟ್‌ ಮೊರೆ ಹೋಗುವುದು ನಿಷ್ಫಲ ಪ್ರಯತ್ನ ಎಂದು ಅಭಿಪ್ರಾಯಪಟ್ಟರು.
 
ರಾಷ್ಟ್ರ ರಾಜಧಾನಿಯಲ್ಲಿ ಆಡಳಿತಾಧಿಕಾರಿಗಳ ನೇಮಕದಲ್ಲಿ ಎಲ್‌ಜಿಗೆ ಸಂಪೂರ್ಣ ಅಧಿಕಾರ ನೀಡುವ ಕೇಂದ್ರ ಸರ್ಕಾರದ ಅಧಿಸೂಚನೆ ವಿರುದ್ಧ ಕೇಜ್ರಿವಾಲ್ ಸರ್ಕಾರ ಹೈಕೋರ್ಟ್ ಮೊರೆ ಹೋಗಿತ್ತು. ಕೇಜ್ರಿವಾಲ್ ಅರ್ಜಿಯನ್ನು ಮುಖ್ಯನ್ಯಾಯಮೂರ್ತಿ ರೋಹಿಣಿ ಮತ್ತು ನ್ಯಾ. ಜಯಂತ್ ನಾಥ್ ಪೀಠ ವಜಾಮಾಡಿತ್ತು.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ 

ವೆಬ್ದುನಿಯಾವನ್ನು ಓದಿ