`ನಾವು ಅಧಿಕಾರಕ್ಕೆ ಬಂದರೆ ಸಂಪೂರ್ಣ ಮನೆ ಕಂದಾಯ ರದ್ದು’

ಭಾನುವಾರ, 26 ಮಾರ್ಚ್ 2017 (11:39 IST)
ವಿಧಾನಸಭಾ ಚುನಾವಣೆ ಸಂದರ್ಭ ನೀರು ಮತ್ತು ಕರೆಂಟ್ ಬಿಲ್ ಕಡಿತಗೊಳಿಸುವುದಾಗಿ ಭರವಸೆ ನೀಡಿ ಅದನ್ನ ಪೂರೈಸಿದ್ದ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್, ದೆಹಲಿ ಸ್ಥಲೀಯ ಸಂಸ್ಥೆಗಳ ಚುನಾವಣೆಯಲ್ಲಿ ಹೊಸ ಘೊಷಣೆ ಮಾಡಿದ್ದಾರೆ. ಸ್ಥಳೀಯ ಸಂಸ್ಥೆಗಳಲ್ಲಿ ನಮ್ಮ ಸರ್ಕಾರ ಬಂದರೆ ದೆಹಲಿಯ ಜನರ ಮನೆ ಕಂದಾಯವನ್ನ ರದ್ದು ಮಾಡುವುದಾಗಿ ಘೋಷಿಸಿದ್ದಾರೆ.

ಪಾಲಿಕೆಯಲ್ಲಿ ಮನೆ ಕಂದಾಯ ಭ್ರಷ್ಟಾಚಾರದ ಪ್ರಮುಖ ಮೂಲವಾಗಿದ್ದು, ನಾವು ಅಧಿಕಾರಕ್ಕೆ ಬರುತ್ತಿದ್ದಂತೆ ಅದರ ಅಂತ್ಯವಾಗುತ್ತೆ ಎಂದು ಕೇಜ್ರಿವಾಲ್ ಹೇಳಿದ್ದಾರೆ.

ಇದೇವೇಳೆ, ದೆಹಲಿಯ ಸ್ಥಳೀಯ ಸಂಸ್ಥೆಗಳಲ್ಲಿ ಆಢಳಿತ ನಡೆಸುತ್ತಿರುವ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ ಸಿಎಂ ಕೇಜ್ರಿವಾಲ್, ಸ್ಕೂಟರಿನಲ್ಲಿ ಓಡಾಡುತ್ತಿದ್ದ ಬಿಜೆಪಿ ಕಾರ್ಯಕರ್ತರು ಕೌನ್ಸಿಲರ್ ಆದ ಬಳಿಕ ಲಕ್ಸುರಿ ಕಾರುಗಳಲ್ಲಿ ಓಡಾಡುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದ್ದಾರೆ. ಹೀಗಾಗಿ, ದೆಹಲಿಯ 3 ಪಾಲಿಕೆಗಳಲ್ಲಿ ಆಮ್ ಆದ್ಮಿಯನ್ನ ಅಧಿಕಾರಕ್ಕೆ ತರುವಂತೆ ಮತದಾರರಿಗೆ ಮನವಿ ಮಾಡಿದ್ಧಾರೆ.

ದಕ್ಷಿಣ ದೆಹಲಿ ಮುನ್ಸಿಪಲ್ ಕಾರ್ಪೋರೇಶನ್, ನ್ಯೂ ಡೆಲ್ಲಿ ಮುನ್ಸಿಪಲ್ ಕೌಸ್ನಿಲ್ ಮತ್ತು ಈಸ್ಟ್ ಡೆಲ್ಲಿ ಮುನ್ಸಿಪಲ್ ಕಾರ್ಪೋರೇಶನ್`ಗೆ ಏಪ್ರಿಲ್ 23ರಂದು ಚುನಾವಣೆ ನಡೆಯಲಿದ್ದು, ಏಪ್ರಿಲ್ 26ಕ್ಕೆ ಮತ ಎಣಿಕೆ ನಡೆಯಲಿದೆ.

ವೆಬ್ದುನಿಯಾವನ್ನು ಓದಿ