ರಾಜಸ್ಥಾನದ ಕನಿಷ್ಟ 50 ಪೊಲೀಸರು ಲೈಂಗಿಕ ಅಪರಾಧಗಳಲ್ಲಿ ಶಾಮೀಲು!
ಭಾನುವಾರ, 19 ಸೆಪ್ಟಂಬರ್ 2021 (11:39 IST)
ಜೈಪುರ : ರಾಜಸ್ಥಾನ ಪೊಲೀಸ್ ಇಲಾಖೆಯಲ್ಲಿನ ಕನಿಷ್ಟ 50 ಮಂದಿ ಪೊಲೀಸರು ಲೈಂಗಿಕ ಅಪರಾಧ ಕೃತ್ಯದಲ್ಲಿ ಭಾಗಿಯಾಗಿರುವುದು ಸಾಬೀತಾಗಿದೆ ಎಂದು ತನಿಖಾ ವರದಿಯಲ್ಲಿ ಹೇಳಲಾಗಿದೆ.
ರಾಜ್ಯ ಹಿರಿಯ ಪೊಲೀಸ್ ಮಹಾ ವರಿಷ್ಠರು ಈ ಬಗ್ಗೆ ತನಿಖೆ ನಡೆಸಿ ವರದಿ ನೀಡುವಂತೆ ಆದೇಶಿಸಿದ್ದರು.
ಕೆಲ ದಿನಗಳ ಹಿಂದಷ್ಟೇ ಪೊಲೀಸ್ ಅಧಿಕಾರಿಯೋರ್ವರು ಮಹಿಳಾ ಕಾನ್ ಸ್ಟೇಬಲ್ ಜೊತೆ ಸರಸ ನಡೆಸುತ್ತಿರುವ ವಿಡಿಯೊ ವೈರಲ್ ಆಗಿತ್ತು ಎನ್ನುವುದು ಗಮನಾರ್ಹ. ಈ ಘಟನೆ ಬೆಳಕಿಗೆ ಬಂದ ತಕ್ಷಣವೇ ಇಬ್ಬರೂ ಆರೋಪಿಗಳನ್ನು ಅಮಾನತುಗೊಳಿಸಲಾಗಿತ್ತು.
ಕಳೆದ ಕೆಲವು ತಿಂಗಳುಗಳಿಂದ ರಾಜಸ್ಥಾನ ಪೊಲೀಸ್ ಇಲಾಖೆಯೊಳಗಿನ ಭ್ರಷ್ಟಾಚಾರ ಮತ್ತು ಅನಾಚರಗಲ ಸುದ್ದಿಗಳು ಹೊರಬೀಳುತ್ತಿರುವುದರಿಂದ ಅಲ್ಲಿನ ಪೊಲೀಸ್ ಇಲಾಖೆ ಮುಜುಗರ ಅನುಭವಿಸುವಂತಾಗಿದೆ.
ಪೊಲೀಸ್ ಇಲಾಖೆಯ ತನಿಖಾವರದಿಯಲ್ಲಿ 50 ಮಂದಿ ಪೊಲೀಸ್ ಅಧಿಕಾರಿಗಳು ಲೈಂಗಿಕ ಅಪರಾಧಗಳಲ್ಲಿ ಭಾಗಿಯಾಗಿರುವುದು ಮಾತ್ರವಲ್ಲದೆ 400ಕ್ಕೂ ಹೆಚ್ಚು ಮಂದಿ ಪೊಲೀಸರು ಲಂಚ ಸೇರಿದಂತೆ ನಾನಾ ಬಗೆಯ ಭ್ರಷ್ಟಾಚಾರದಲ್ಲಿ ತೊಡಗಿರುವುದು ಪತ್ತೆಯಾಗಿದೆ.