ಸಿಹಿಸುದ್ದಿ; ಎಟಿಎಂ ವಿತ್‌ಡ್ರಾ ಮಿತಿ 50 ಸಾವಿರಕ್ಕೆ ಏರಿಕೆ

ಬುಧವಾರ, 8 ಫೆಬ್ರವರಿ 2017 (15:23 IST)
ನೋಟು ಬ್ಯಾನ್‌ನಿಂದ ಬಸವಳಿದು ಹೋಗಿದ್ದ ಶ್ರೀಸಾಮಾನ್ಯರಿಗೊಂದು ಸಿಹಿಸುದ್ದಿ. ಭಾರತೀಯ ರಿಸರ್ವ್ ಬ್ಯಾಂಕ್ ವಾರದ ಮಿತಿಯನ್ನು 24ಸಾವಿರದಿಂದ 50ಸಾವಿರಕ್ಕೆ ಏರಿಕೆ ಮಾಡಿದೆ. 
ಫೆಬ್ರವರಿ 20ರಿಂದ ಇದು ಜಾರಿಗೆ ಬರಲಿದ್ದು, ಮಾರ್ಚ್ 13ರ ನಂತರ ವಾರದ ಮಿತಿಯನ್ನು ಸಂಪೂರ್ಣವಾಗಿ ಹಿಂತೆಗೆತೆದುಕೊಳ್ಳುವುದಾಗಿ ಆರ್‌ಬಿಐ ತಿಳಿಸಿದೆ. 

ಈ ಹಿಂದೆ ಚಾಲ್ತಿ ಖಾತೆದಾರರು ಮಾತ್ರ ಒಂದು ವಾರಕ್ಕೆ ರೂ. 50,000 ನಗದು ಹಣವನ್ನು ವಿತ್ ಡ್ರಾ ಮಾಡಿಕೊಳ್ಳಬಹುದಾಗಿತ್ತು.

ವೆಬ್ದುನಿಯಾವನ್ನು ಓದಿ