ಕಾಲೇಜು ಯುವತಿಯ ಅಪಹರಿಸಿ ಮಾನಭಂಗಕ್ಕೆ ಯತ್ನಿಸಿದ ಆಟೋ ಚಾಲಕ

ಶುಕ್ರವಾರ, 15 ಜನವರಿ 2021 (09:41 IST)
ಹರ್ಯಾಣ: ಕಾಲೇಜು ಯುವತಿಯೊಬ್ಬಳನ್ನು ಅಪಹರಿಸಿ ಆಟೋ ಚಾಲಕನೊಬ್ಬ ಮಾನಭಂಗಕ್ಕೆ ಯತ್ನಿಸಿದ ಘಟನೆ ಹರ್ಯಾಣದಲ್ಲಿ ನಡೆದಿದೆ.


ಕಾಲೇಜಿಗೆ ಹೋಗಲು ಯುವತಿ ಆರೋಪಿಯ ಆಟೋ ಗೊತ್ತು ಮಾಡಿದ್ದಳು. ಆದರೆ ಚಾಲಕ ತನ್ನ ಸಂಬಂಧಿಯೊಬ್ಬನ ಸಹಾಯದೊಂದಿಗೆ ದಾರಿ ಮಧ್ಯದಲ್ಲೇ ಲೈಂಗಿಕವಾಗಿ ಕಿರುಕುಳ ನೀಡುತ್ತಿದ್ದ. ಈ ವೇಳೆ ಗಸ್ತಿನಲ್ಲಿದ್ದ ಪೊಲೀಸರಿಗೆ ಮಾಹಿತಿ ತಿಳಿದುಬಂತು. ತಕ್ಷಣವೇ ಆರೋಪಿಗಳನ್ನು ಬಂಧಿಸಿ, ಯುವತಿಯನ್ನು ರಕ್ಷಿಸಲಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ