ವಿಶೇಷ ಸಿಬಿಐ ನ್ಯಾಯಾಲಯದಲ್ಲಿ ಇಂದು ಅಯೋಧ್ಯೆ ಕೇಸು ವಿಚಾರಣೆ

ಬುಧವಾರ, 24 ಮೇ 2017 (09:48 IST)
ನವದೆಹಲಿ: 1992 ರಲ್ಲಿ ಅಯೋಧ್ಯೆಯಲ್ಲಿ ಬಾಬ್ರಿ ಮಸೀದಿ ಧ್ವಂಸ ಪ್ರಕರಣದ ಕುರಿತು ಸಿಬಿಐನ ವಿಶೇಷ ನ್ಯಾಯಾಲಯ ಇಂದು ವಿಚಾರಣೆ ನಡೆಸಲಿದೆ.

 
ಸೋಮವಾರ ಆರು ಮಂದಿ ಆಪಾದಿತರ ಪೈಕಿ ಸತೀಶ್ ಪ್ರಧಾನ್ ನ್ಯಾಯಾಲಯಕ್ಕೆ ಹಾಜರಾಗದ ಕಾರಣ ವಿಚಾರಣೆಯನ್ನು ಮುಂದೂಡಲಾಗಿತ್ತು. ಮಂಗಳವಾರ ನ್ಯಾಯಾಧೀಶರು ಅಲಭ್ಯರಾಗಿದ್ದರಿಂದ ವಿಚಾರಣೆ ನಡೆಯಲಿಲ್ಲ.

ಆರು ಮಂದಿ ಆಪಾದಿತರಲ್ಲದೆ, ಬಿಜೆಪಿಯ ಹಿರಿಯ ನಾಯಕರಾದ ಎಲ್ ಕೆ ಅಡ್ವಾಣಿ,  ಮುರಳಿ ಮನೋಹರ್ ಜೋಶಿ ಮತ್ತು ಉಮಾ ಭಾರತಿ ವಿರುದ್ಧವೂ ವಿಚಾರಣೆ ನಡೆಯಲಿದೆ. ಕಳೆದ ತಿಂಗಳು ಸುಪ್ರೀಂ ಕೋರ್ಟ್ ಈ ಮೂವರನ್ನೂ ವಿಚಾರಣೆಗೊಳಪಡಿಸುವಂತೆ ಆದೇಶ ನೀಡಿತ್ತು.

ಇದೊಂದು ಸೂಕ್ಷ್ಮ ಪ್ರಕರಣವಾಗಿದ್ದರಿಂದ ಸಿಬಿಐ ನ್ಯಾಯಾಲಯ ಮೇ 20 ರಿಂದ ಹಂತ ಹಂತದ ವಿಚಾರಣೆ ಆರಂಭಿಸಿತ್ತು. ಶೀಘ್ರವೇ ವಿಚಾರಣೆ ಮುಗಿಸಿ ಎರಡು ವರ್ಷದೊಳಗೆ ತೀರ್ಪು ಹೊರ ನೀಡುವಂತೆ ಸುಪ್ರೀಂ ಕೋರ್ಟ್ ಸೂಚಸಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ   

ವೆಬ್ದುನಿಯಾವನ್ನು ಓದಿ