ಬಾಬಾ ರಾಮ್ ರಹೀಮ್ ಆಶ್ರಮದಲ್ಲಿ ಶಸ್ತ್ರಾಸ್ತ್ರ ಭಂಡಾರ ಪತ್ತೆ
ಸೋಮವಾರ, 4 ಸೆಪ್ಟಂಬರ್ 2017 (16:11 IST)
ಇಬ್ಬರು ಮಹಿಳೆಯರ ಮೇಲೆ ಅತ್ಯಾಚಾರವೆಸಗಿದ ಪ್ರಕರಣದಲ್ಲಿ 20 ವರ್ಷ ಜೈಲು ಶಿಕ್ಷೆಗೆ ಗುರಿಯಾಗಿರುವ ಬಾಬಾ ರಾಮ್ ರಹೀಮ್ ಆಶ್ರಮದಲ್ಲಿ ಭಾರಿ ಪ್ರಮಾಣದ ಶಸ್ತ್ರಾಸ್ತ್ರ ಭಂಡಾರವೇ ಪತ್ತೆಯಾಗಿದೆ.
ನಗರದಲ್ಲಿರುವ ಬಾಬಾ ಆಶ್ರಮವನ್ನು ವಶಕ್ಕೆ ತೆಗೆದುಕೊಂಡಿರುವ ಪೊಲೀಸರು ಆಶ್ರಮವನ್ನು ಪರಿಶೀಲನೆ ನಡೆಸಿದಾಗ ಭಾರಿ ಪ್ರಮಾಣದ ಬಂದೂಕುಗಳು ಸೇರಿದಂತೆ ಅಪಾರ ಪ್ರಮಾಣದ ಶಸ್ತ್ರಗಳು ಕಂಡುಬಂದಿವೆ.
ನೂರಾರು ಎಕರೆ ಭೂಮಿ ಹೊಂದಿರುವ ಆಶ್ರಮದ ಸಂಪೂರ್ಣ ತನಿಖೆ ನಡೆಸಿದಾಗ ಐಷಾರಾಮಿ ಕೊಠಡಿಗಳು, ವಿದೇಶಿ ವಸ್ತುಗಳು ಪತ್ತೆಯಾಗಿವೆ. ತಾನೊಬ್ಬ ಸ್ವಾಮಿಜಿ ಎಂದು ಕರೆದುಕೊಳ್ಳುವ ಬಾಬಾ ರಾಮ್ ರಹೀಮ್‌ನ ಮತ್ತೊಂದು ಮುಖವಾಡ ಬಯಲಿಗೆ ಬಂದಿದೆ.
ಬಾಬಾ ರಾಮ್ ರಹೀಮ್ ವಿರುದ್ಧ ಅಕ್ರಮ ಶಸ್ತ್ರಾಸ್ತ್ರ ಸಂಗ್ರಹ ಕೇಸ್ ದಾಖಲಿಸಲಾಗುವುದು ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.