'ಮೋದಿ ನಮ್ಮ ಹೀರೋ' ಎಂದ ಬಲೂಚಿ ನಾಯಕಿ

ಸೋಮವಾರ, 7 ನವೆಂಬರ್ 2016 (15:10 IST)
ಬಲೂಚಿಸ್ತಾನದ ಜನರ ಅವಸ್ಥೆಯನ್ನು ಹೈಲೈಟ್ ಮಾಡಿ ಪ್ರಧಾನಿ ಮೋದಿ 'ನಮ್ಮ ಹೀರೋ' ಎಂದು ಬಣ್ಣಿಸಿರುವ ಬಲೂಚಿ ನಾಯಕಿ ನೈಲಾ ಖಾದ್ರಿ, ಕಳೆದ 70 ವರ್ಷಗಳಲ್ಲಿ ಪಾಕಿಸ್ತಾನ ಚೀನಾದ ಸಹಾಯದೊಂದಿಗೆ  "ನರಮೇಧ"ದಲ್ಲಿ ಪಾಲ್ಗೊಂಡಿದೆ ಎಂದು ಆರೋಪಿಸಿದ್ದಾರೆ. 
 
ಬಲೂಚಿಸ್ತಾನ ತನ್ನ ಮುಕ್ತಿಗಾಗಿ ಹೋರಾಡುತ್ತಿದೆ. ಪಾಕಿಸ್ತಾನದ ಸೈನ್ಯ ಚೀನಾದ ಸಹಾಯದೊಂದಿಗೆ ನಮ್ಮ ಸ್ವಾತಂತ್ರ್ಯ ಚಳುವಳಿ ನಿಗ್ರಹಿಸಲು, ಅಮಾಯಕ ಜನರ ಮಾರಣಹೋಮವನ್ನು ನಡೆಸುತ್ತಿದೆ ಎಂದು ಬಲೂಚ್ ಮಹಿಳಾ ಒಕ್ಕೂಟದ ಅಧ್ಯಕ್ಷೆ ಖಾದ್ರಿ ಕಿಡಿಕಾರಿದ್ದಾರೆ. 
 
ಕಳೆದ 70 ವರ್ಷಗಳಿಂದ ನಾವು ದೌರ್ಜನ್ಯವನ್ನು ಸಹಿಸುತ್ತಿದ್ದೇವೆ. ಆದರೆ ಪ್ರಧಾನಿ ಮೋದಿ ಅವರಿಂದಾಗಿ ನಮ್ಮ ದುಃಸ್ಥಿತಿ ಜಗತ್ತಿನ ಮುಂದೆ ಅನಾವರಣಗೊಂಡಿತು ಎಂದವರು ಹೇಳಿದ್ದಾರೆ. 
 
ಅವರು ನಮ್ಮ ಹೀರೋವಾಗಿದ್ದಾರೆ. ಬಲೂಚಿಸ್ತಾನದ ಹೀರೋ ಅವರು. ಕಾರಣ ಇದೇ ಮೊದಲ ಬಾರಿಗೆ ನಮ್ಮ  ಸಮಸ್ಯೆಯನ್ನು ಇಷ್ಟೊಂದು ಗಮನವಿಟ್ಟು ಅವಲೋಕಿಸಲಾಗಿದೆ. ಪಾಕಿಸ್ತಾನದ ಸೈನಿಕರು ಹದ್ದುಮೀರಿ ವರ್ತಿಸುತ್ತಿದ್ದಾರೆಯ ನಮ್ಮ ಮಹಿಳೆಯರ ಮೇಲೆ, ಯುವತಿಯರ ಮೇಲೆ ಅವರು ಅತ್ಯಾಚಾರವೆಸಗುತ್ತಿದ್ದಾರೆ. ಜನರನ್ನು ಕೊಂದು ಅವರ ಅಂಗಾಂಗಗಳನ್ನು ಕಿತ್ತೊಯ್ಯಲಾಗುತ್ತಿದೆ. ಸಣ್ಣ ಸಮ್ಮ ವಿಷಯಕ್ಕೆ ನಮ್ಮ ಮೇಲೆ ಬಾಂಬ್ ದಾಳಿ ನಡೆಸಲಾಗುತ್ತಿದೆ. ಭಾರತದಿಂದ ನೈತಿಕ ಬೆಂಬಲ ದೊರತ ಮೇಲೆ ನಮ್ಮ ಸ್ವಾತಂತ್ರ ಹೋರಾಟ ಮತ್ತಷ್ಟು ತೀವ್ರಗೊಂಡಿದೆ ಎಂದಿದ್ದಾರೆ ಖಾದ್ರಿ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ