ಆನ್ಲೈನ್ ಶಾಪಿಂಗ್‍ನಲ್ಲಿ ಎಲ್ಲರನ್ನು ಹಿಂದಿಕ್ಕಿದ ಬೆಂಗಳೂರಿಗರು

ಭಾನುವಾರ, 2 ಜುಲೈ 2023 (07:22 IST)
ನವದೆಹಲಿ : ಅಮೆಜಾನ್, ಪ್ಲಿಪ್ಕಾರ್ಟ್, ಮೀಶೋನಂತಹ ಇತರ ಶಾಪಿಂಗ್ ಸೈಟ್ಗಳಲ್ಲಿ ಬೆಂಗಳೂರಿನ ಜನರೇ ಅತಿ ಹೆಚ್ಚು ಸಮಯ ಕಳೆಯುತ್ತಿದ್ದಾರೆ ಎಂದು ಸೈಬರ್ ಮೀಡಿಯಾ ರಿಸರ್ಚ್ನ ಅಧ್ಯಯನದ ವರದಿ ಹೇಳಿದೆ.

ಬೆಂಗಳೂರಿನ ಜನರು ಆನ್ಲೈನ್ ಪ್ಲಾಟ್ಫಾರಂಗಳಲ್ಲಿ ವಾರಕ್ಕೆ ಸರಾಸರಿ ನಾಲ್ಕು ಗಂಟೆಗಳ ಸಮಯ ವ್ಯಯ ಮಾಡುತ್ತಿದ್ದಾರೆ ಎಂದು ವರದಿಯಲ್ಲಿ ಹೇಳಿದೆ. ಬೆಂಗಳೂರಿನ ಬಳಿಕ ಗುವಾಹಟಿ, ಕೊಯಮತ್ತೂರು, ಲಕ್ನೋದ ಜನರು ಆನ್ಲೈನ್ ಶಾಪಿಂಗ್ ಗೀಳಿಗೆ ಬಿದ್ದಿದ್ದಾರೆ.

ಅಲ್ಲಿನ ಜನ ವಾರಕ್ಕೆ ಸುಮಾರು 2 ಗಂಟೆ 25 ನಿಮಿಷಗಳ ಕಾಲವನ್ನು ಈ ಉದ್ದೇಶಕ್ಕಾಗಿ ಕಳೆದಿದ್ದಾರೆ. ವಿಶೇಷವಾಗಿ ಮಹಿಳೆಯರು ಇ-ಕಾಮರ್ಸ್ನಲ್ಲಿ ವರ್ಷಕ್ಕೆ ಸುಮಾರು 149 ಗಂಟೆಗಳನ್ನು ಕಳೆಯುತ್ತಿದ್ದಾರೆ ಎಂದು ವರದಿ ಹೇಳಿದೆ. 
29% ರಷ್ಟು ಜನರು ಆನ್ಲೈನ್ನಲ್ಲಿ 15,000 ರೂ. ನಿಂದ 20,000 ರೂ. ಬೆಲೆಯ ಸ್ಮಾರ್ಟ್ಫೋನ್ಗಳ ಖರೀದಿ ಮಾಡುತ್ತಿದ್ದಾರೆ. ಗುವಾಹಟಿ, ಕೊಯಮತ್ತೂರು, ಲಕ್ನೋ ಖರೀದಿದಾರರು ಕಳೆದ ಆರು ತಿಂಗಳಲ್ಲಿ ಸರಾಸರಿ ಆನ್ಲೈನ್ನಲ್ಲಿ 20,100 ರೂ. ಖರ್ಚು ಮಾಡಿದ್ದಾರೆ. ಬೆಂಗಳೂರಿಗರು ಸರಾಸರಿ 21,700 ರೂ. ಖರ್ಚು ಮಾಡಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ